ಇದು ಹೊಸ ಕಾಲದ ‘ಯುಗಪುರುಷ’!

7

ಇದು ಹೊಸ ಕಾಲದ ‘ಯುಗಪುರುಷ’!

Published:
Updated:
ಇದು ಹೊಸ ಕಾಲದ ‘ಯುಗಪುರುಷ’!

ಮಂಜುನಾಥ್ ಎಂ. ನಿರ್ದೇಶನದ, ಆ್ಯಕ್ಷನ್ ಮತ್ತು ಪ್ರೀತಿಯ ಕಥಾಹಂದರ ಇರುವ ‘ಯುಗಪುರುಷ’ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಈ ಚಿತ್ರದಲ್ಲಿ ಐದು ಹಾಡುಗಳು ಇವೆ, ಎಲ್ಲ ಹಾಡುಗಳು ಒಂದಕ್ಕೊಂದು ಪೂರಕವಾಗಿ ಇವೆ ಎಂದು ಮಂಜುನಾಥ್ ಹೇಳಿಕೊಂಡಿದ್ದಾರೆ. ಈ ಸಿನಿಮಾ ಜೂನ್‌ 9ರಂದು ಬಿಡುಗಡೆ ಆಗಲಿದೆ.

ಆದರೆ ಹೊಸ ‘ಯುಗಪುರುಷ’ ಸಿನಿಮಾದ ನಾಯಕ ನಟ ಅರ್ಜುನ್ ದೇವ್ ಅವರು ರವಿಚಂದ್ರನ್ ಅವರನ್ನು ಹೋಲುತ್ತಾರೆ ಎಂಬ ಮಾತು ಹಾಡುಗಳ ಬಿಡುಗಡೆ ವೇಳೆ ಕೇಳಿಬಂತು! ಈ ಚಿತ್ರದಲ್ಲಿ ಗುಜರಾತಿ ಬೆಡಗಿ ಪೂಜಾ ಜವೇರಿ ಅವರನ್ನು ಅಭಿನಯಿಸಿದ್ದಾರೆ.

‘ಈ ಚಿತ್ರದ ಮೂಲಕ ಸಮಾಜಕ್ಕೆ ಏನೋ ಸಂದೇಶ ನೀಡಬೇಕು ಎಂಬ ಹಂಬಲ ನಮ್ಮದಲ್ಲ’ ಎಂದು ನಿರ್ದೇಶಕ ಮಂಜುನಾಥ್ ಹೇಳಿದ್ದಾರೆ. ಇದರ ನಿರ್ಮಾಪಕರು ಮಂಜುನಾಥ್ ಬಾಬು ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry