ಭಾರತದ ಜಿಡಿಪಿ ಇಳಿಕೆ: ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಚೀನಾ ಪತ್ರಿಕೆ

7

ಭಾರತದ ಜಿಡಿಪಿ ಇಳಿಕೆ: ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಚೀನಾ ಪತ್ರಿಕೆ

Published:
Updated:
ಭಾರತದ ಜಿಡಿಪಿ ಇಳಿಕೆ: ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಚೀನಾ ಪತ್ರಿಕೆ

ನವದೆಹಲಿ: ನೋಟು ರದ್ಧತಿಯ ಬಳಿಕ ಭಾರತದ ಜಿಡಿಪಿ ಕುಸಿತ ಕಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾದ ಪತ್ರಿಕೆಯೊಂದು ದನ್ಯವಾದ ಹೇಳಿದೆ.

ಚೀನಾದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ  ವಿಶ್ಲೇಷಣಾತ್ಮಕ ಲೇಖನವೊಂದನ್ನು ಪ್ರಕಟಿಸಿ ಪ್ರಧಾನಿ ಮೋದಿ ಅವರಿಗೆ ಥ್ಯಾಂಕ್ಸ್  ಹೇಳಿದೆ.

ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಚೀನಾ ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ದೇಶಗಳಾಗಿವೆ.  ಈ ಎರಡು ದೇಶಗಳ ಮಧ್ಯೆ ತೀವ್ರ ಪೈಪೊಟಿ ಇದೆ.  ಈ ಸ್ಪರ್ಧೆಯನ್ನು ಆನೆ ಮತ್ತು ಡ್ರ್ಯಾಗರ್‌ ನಡುವಿನ ರೇಸ್‌ಗೆ ಹೋಲಿಕೆ ಮಾಡಬಹುದು. ಆನೆ ಭಾರತವನ್ನು ಪ್ರತಿನಿಧಿಸಿದರೆ, ಡ್ರ್ಯಾಗರ್‌ ಚೀನಾವನ್ನು ಪ್ರತಿನಿಧಿಸುತ್ತದೆ ಎಂದು ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ವಿಶ್ಲೆಷಣೆ ಮಾಡಿದೆ.

2016–17ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಶೇ 6.1ಕ್ಕೆ ಕುಸಿತ ಕಾಣಲು ನೋಟು ರದ್ದತಿಯೇ ಕಾರಣ ಎಂದು ಆ ಪತ್ರಿಕೆ ಹೇಳಿದೆ.  ಭಾರತದ ಜಿಡಿಪಿ ಇಳಿಕೆಯ ಲಾಭ ಪಡೆದು ಚೀನಾ ಜಾಗತಿಕವಾಗಿ ಮತ್ತಷ್ಟು ಪ್ರಬಲವಾಗಿ ಬೆಳೆಯಲಿದೆ ಎಂದು ಪತ್ರಿಕೆ ತಿಳಿಸಿದೆ.

ಈ ವಿಶ್ಲೇಷಣಾತ್ಮಕ ಲೇಖನವನ್ನು ಚೀನಾದ ಆರ್ಥಿಕ ಮತ್ತು ರಾಜಕೀಯ ಚಿಂತಕ ಕ್ಸಿಯೊ ಕ್ಸಿನ್‌ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry