ಅಂದದ ಮೊಗಕೆ ಹಲಸು

7

ಅಂದದ ಮೊಗಕೆ ಹಲಸು

Published:
Updated:
ಅಂದದ ಮೊಗಕೆ ಹಲಸು

ನಮ್ಮ ರಾಜ್ಯದ ಬಹುಜನರ ಮೆಚ್ಚಿನ ಹಣ್ಣು ಹಲಸು ಸೌಂದರ್ಯವರ್ಧಕವೂ ಹೌದು. ಕಳಾಹೀನ ಚರ್ಮಕ್ಕೆ ಹೊಸ ಹೊಳಪು ನೀಡುವ ಸಾಮರ್ಥ್ಯ ಹಲಸಿಗೆ ಇದೆ.

*ವಯಸ್ಸಾಗುತ್ತಿದ್ದಂತೆ ಕುತ್ತಿಗೆಯ ಸುತ್ತಲೂ ನೆರಿಗೆಗಳು ಉಂಟಾಗುತ್ತವೆ. ಇದನ್ನು ನಿಯಂತ್ರಿಸಲು ಬಾಳೆಹಣ್ಣು, ಹಲಸಿನ ಹಣ್ಣು, ಹಾಲಿನ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿ ಅರ್ಧಗಂಟೆಯ ನಂತರ ತೊಳೆದುಕೊಳ್ಳಬೇಕು.

*ಕಣ್ಣಿನ ಸುತ್ತಲೂ ನೆರಿಗೆಗಳು ಕಾಣಿಸಿಕೊಂಡಿವೆಯೇ? ಜೇನುತುಪ್ಪ, ಹಾಲು, ಹಲಸಿನ ಹಣ್ಣಿನ ಮಿಶ್ರಣವನ್ನು ಕಣ್ಣಿನ ಸುತ್ತಲೂ ಹಚ್ಚಿಕೊಂಡು, ಹತ್ತು ನಿಮಿಷದ ನಂತರ ತೊಳೆದುಕೊಳ್ಳಿ.

*ಬಿಸಿಲಿಗೆ ಮುಖ ಕಪ್ಪಾಗಿದೆಯೇ? ಹಲಸಿನ ಹಣ್ಣನ್ನು ರುಬ್ಬಿ, ತುಟಿಗೆ ಮೃದುವಾಗಿ ಮಸಾಜ್‌ ಮಾಡಿಕೊಳ್ಳಿ. ಹತ್ತು ನಿಮಿಷದ ನಂತರ ತೊಳೆದುಕೊಳ್ಳಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

*ಆಲಿವ್‌ ಎಣ್ಣೆಯ ಜೊತೆಗೆ ಹಲಸಿನ ಹಣ್ಣಿನ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ  ಮೃದುವಾಗುತ್ತದೆ.

*ಜೇನು ಮತ್ತು ಹಲಸಿನ ಹಣ್ಣನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

*ಹಲಸಿನಹಣ್ಣು, ಹಾಲು, ಸೌತೆಕಾಯಿಯ ರಸದ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಹತ್ತು ನಿಮಿಷದ ನಂತರ ತೊಳೆಯುವುದರಿಂದ ಕಳಾಹೀನ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry