ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕನ್ನಡ ಪದಗಳನ್ನು ಕಲಿಸಿದ್ದು ‘ಪ್ರಜಾವಾಣಿ’

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 269ನೇ ರ‍್ಯಾಂಕ್ ಪಡೆದಿರುವ ಫಕ್ಕೀರೇಶ ಬದಾಮಿ, ತಮ್ಮ ಅಧ್ಯಯನಕ್ಕೆ ನೆರವಾದ ‘ಪ್ರಜಾವಾಣಿ’ ಪತ್ರಿಕೆಗೆ ಶುಕ್ರವಾರ ಇಲ್ಲಿ ಕೃತಜ್ಞತೆ ಸಲ್ಲಿಸಿದರು.

ನಗರದ ಉಣಕಲ್‌ನಲ್ಲಿರುವ ಚೇತನ ಬಿಸಿನೆಸ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ದಿನಗಳಲ್ಲಿ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ ನನಗೆ ಹೊಸ, ಹೊಸ ಕನ್ನಡ ಪದಗಳನ್ನು ಕಲಿಸಿಕೊಟ್ಟಿತು. ಉದಾಹರಣೆಗೆ ‘ಸರ್ಜಿಕಲ್ ಸ್ಟ್ರೈಕ್’ಗೆ ‘ನಿರ್ದಿಷ್ಟ ದಾಳಿ’ ಎಂಬ ಪದ ಬಳಕೆ ಕಲಿಸಿದ್ದೇ ಅದು’ ಎಂದು ಅವರು ಹೇಳಿದರು.

‘ನನ್ನ ದಿನಚರಿ ‘ಪ್ರಜಾವಾಣಿ’ ಪತ್ರಿಕೆ ಓದುವುದರಿಂದ ಆರಂಭವಾಗುತ್ತದೆ. ಕನಿಷ್ಠ ಒಂದು ಗಂಟೆ ಬದ್ಧತೆಯಿಂದ ಸಮಗ್ರವಾಗಿ ಓದುತ್ತಿದ್ದೆ. ಮುಖಪುಟದಲ್ಲಿ ಪ್ರಕಟವಾಗುತ್ತಿದ್ದ ಆಯಾ ದಿನದ ಪ್ರಮುಖ ಸುದ್ದಿಗಳು, ಸಂಪಾದಕೀಯ ಪುಟಗಳಲ್ಲಿನ ಲೇಖನಗಳು, ರಾಷ್ಟ್ರೀಯ, ಅಂತರರಾಷ್ಟ್ರೀಯ ಸುದ್ದಿಗಳನ್ನು ಪ್ರತಿದಿನವೂ ತಪ್ಪದೇ ಓದಿದ್ದು, ನನಗೆ ಅತ್ಯುಪಯೋಗಕ್ಕೆ ಬಂತು. ಇದನ್ನು ಯಾರೂ ಮುಖಸ್ತುತಿ ಎಂದುಕೊಳ್ಳಬಾರದು, ಇತರ ಮಾಧ್ಯಮದವರೂ ಅನ್ಯಥಾ ಭಾವಿಸಬಾರದು’ ಎಂದು ಹೇಳಿ ‘ಪ್ರಜಾವಾಣಿ’ಗೆ ಧನ್ಯವಾದ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT