ತಪ್ಪು ಗ್ರಹಿಕೆಯಿಂದ ಪಾತಾಳಗಂಗೆಗೆ ವಿರೋಧ

7

ತಪ್ಪು ಗ್ರಹಿಕೆಯಿಂದ ಪಾತಾಳಗಂಗೆಗೆ ವಿರೋಧ

Published:
Updated:
ತಪ್ಪು ಗ್ರಹಿಕೆಯಿಂದ ಪಾತಾಳಗಂಗೆಗೆ ವಿರೋಧ

ಗದಗ: ಮಾಹಿತಿ ಕೊರತೆಯಿಂದಾಗಿ ‘ಪಾತಾಳ ಗಂಗೆ ಯೋಜನೆ’ ಬಗ್ಗೆ ತಪ್ಪು ಗ್ರಹಿಕೆ ಉಂಟಾಗಿದ್ದು, ಅದರಿಂದಾಗಿಯೇ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಮುಂಡರಗಿ ತಾಲ್ಲೂಕಿನ ಹಮ್ಮಿಗೆ ಜಲಾಶಯಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಾತಾಳ ಗಂಗೆ ಯೋಜನೆ ಬಗ್ಗೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯೇ (ಸಿಎಸ್‍ಐಆರ್) ಕೇಂದ್ರ ಸರ್ಕಾರಕ್ಕೆ  ಶಿಫಾರಸು ಮಾಡಿದೆ.  ಕೇಂದ್ರ ಕೂಡ ಈ ಯೋಜನೆಗೆ ಧನಸಹಾಯ ಒದಗಿಸುವ ಭರವಸೆ ನೀಡಿದೆ. 2,500ದಿಂದ 3,000  ಅಡಿ ಆಳದ ಕೊಳವೆ ಬಾವಿ ಕೊರೆಯಲು ಅಂದಾಜು ₹10 ಕೋಟಿ ಖರ್ಚಾಗುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಜತೆಗೂ ಚರ್ಚಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry