ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಲಕ್ಷಕ್ಕಿಂತ ಅಧಿಕ ನಗದು ವಹಿವಾಟಿಗೆ ಭಾರಿ ದಂಡ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ₹2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ನಗದು ವಹಿವಾಟು ನಡೆಸುವವರಿಗೆ ಭಾರಿ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆಯು   ಎಚ್ಚರಿಕೆ ನೀಡಿದೆ.

ನಗದು ಸ್ವೀಕರಿಸಿದವರಿಗೆ ಅಷ್ಟೇ ಮೊತ್ತದ ದಂಡ ವಿಧಿಸಲಾಗುವುದು ಎಂದೂ ಇಲಾಖೆ ಹೇಳಿದೆ.

ಇದೇ ಏಪ್ರಿಲ್‌ 1ರಿಂದ ಸರ್ಕಾರ ಹಣಕಾಸು ಕಾಯ್ದೆ 2017ರ ಅಡಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟನ್ನು  ನಿಷೇಧಿಸಿದೆ.
ಕಾಯ್ದೆಯಲ್ಲಿ ಹೊಸದಾಗಿ ಸೇರಿಸಲಾದ ‘269ಎಸ್‌ಟಿ ಸೆಕ್ಷನ್‌’ ಅನ್ವಯ, ಒಂದೇ ದಿನದಲ್ಲಿ ₹ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟು  ನಡೆಸುವುದನ್ನು ನಿಷೇಧಿಸಲಾಗಿದೆ.

ಇಂತಹ ವಹಿವಾಟು ನಡೆಯುತ್ತಿರುವುದು ಗಮನಕ್ಕೆ ಬಂದರೆ ಇಲ್ಲವೇ ಅನುಮಾನ ಬಂದಲ್ಲಿ blackmoneyinfo@incometax.gov.in ವಿಳಾಸಕ್ಕೆ ಇ–ಮೇಲ್‌ ಮಾಡುವಂತೆ ಸಾರ್ವಜನಿಕರಿಗೆ  ಮನವಿ ಮಾಡಿಕೊಳ್ಳಲಾಗಿದೆ.

₹ 3 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟು ನಿಷೇಧಿಸುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ 2017–18ರ ಬಜೆಟ್‌ನಲ್ಲಿ ಘೋಷಿಸಿದ್ದರು.

ಆದರೆ, ಹಣಕಾಸು ಮಸೂದೆಯಲ್ಲಿ ನಗದು ವಹಿವಾಟು ಮಿತಿಯನ್ನು ₹ 3 ಲಕ್ಷದಿಂದ ₹2 ಲಕ್ಷಕ್ಕೆ ಇಳಿಸಲಾಗಿದೆ. ಸರ್ಕಾರ, ಬ್ಯಾಂಕ್, ಅಂಚೆ ಕಚೇರಿಯ ಉಳಿತಾಯ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ಗಳ ವಹಿವಾಟಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು  ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT