ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ: ಫಲಿತಾಂಶ ಕುಸಿತ, ಬಾಲಕರ ಮೇಲುಗೈ

Last Updated 3 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಈ ಬಾರಿ ಶೇ 5.26 ರಷ್ಟು ಕುಸಿತವಾಗಿದೆ.

ತೇರ್ಗಡೆ ಪ್ರಮಾಣದಲ್ಲಿ ಬಾಲಕರು, ಬಾಲಕಿಯರನ್ನು ಹಿಂದಿಕ್ಕಿರುವುದು ಈ ವರ್ಷದ ಅಚ್ಚರಿ! 10ರಲ್ಲಿ 10 ಗ್ರೇಡ್‌ ಅಂಕ (ಸಿಜಿಪಿಎ) ಪಡೆದವರಲ್ಲೂ ಬಾಲಕರೇ ಮುಂದಿದ್ದಾರೆ.

ಈ ವರ್ಷ ಶೇ 90.95ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ 96.21ರಷ್ಟು ಫಲಿತಾಂಶ ದಾಖಲಾಗಿತ್ತು. ಶೇ 99.85ರಷ್ಟು ಫಲಿತಾಂಶ ದಾಖಲಿಸುವ ಮೂಲಕ ತಿರುವನಂತರಪುರ ವಲಯ ಮೊದಲ ಸ್ಥಾನದಲ್ಲಿದೆ. ಮದ್ರಾಸ್‌ ವಲಯ (ಶೇ 99.62) 2ನೇ ಸ್ಥಾನಲ್ಲಿದೆ.

ಅಲಹಾಬಾದ್‌ ವಲಯಕ್ಕೆ 3ನೇ ಸ್ಥಾನ (ಶೇ 98.23) ದಕ್ಕಿದೆ. ಶೇ 78.09 ಫಲಿತಾಂಶ ದಾಖಲಿಸುವ ಮೂಲಕ ದೆಹಲಿ ವಲಯ ಕಳಪೆ ಪ್ರದರ್ಶನ ತೋರಿದೆ. ದೇಶದಾದ್ಯಂತ 16,347 ಶಾಲೆಗಳ 16,67,573 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT