ಸಿಬಿಎಸ್‌ಇ 10: ದಕ್ಷಿಣ ವಲಯದಲ್ಲಿ ಶೇ 99.62 ವಿದ್ಯಾರ್ಥಿಗಳು ಪಾಸು

7

ಸಿಬಿಎಸ್‌ಇ 10: ದಕ್ಷಿಣ ವಲಯದಲ್ಲಿ ಶೇ 99.62 ವಿದ್ಯಾರ್ಥಿಗಳು ಪಾಸು

Published:
Updated:
ಸಿಬಿಎಸ್‌ಇ 10: ದಕ್ಷಿಣ ವಲಯದಲ್ಲಿ ಶೇ 99.62 ವಿದ್ಯಾರ್ಥಿಗಳು ಪಾಸು

ಬೆಂಗಳೂರು: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಮದ್ರಾಸ್‌ ವಲಯಕ್ಕೆ ಶೇ 99.62 ಫಲಿತಾಂಶ ಬಂದಿದೆ.

ಬೆಂಗಳೂರಿನ ಹೆಚ್ಚಿನ ಶಾಲೆಗಳ ವಿದ್ಯಾರ್ಥಿಗಳು ಸಿಜಿಪಿಎ 10 ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

ಕೇಂದ್ರೀಯ ವಿದ್ಯಾಲಯದಲ್ಲಿ (ಡಿಆರ್‌ಡಿಓ) ಪರೀಕ್ಷೆಗೆ ಹಾಜರಾಗಿದ್ದ 60 ವಿದ್ಯಾರ್ಥಿಗಳು ಸಿಜಿಪಿಎ 10 ಅಂಕ ಪಡೆದಿದ್ದಾರೆ. ಕುಮಾರನ್ಸ್‌ ಶಾಲೆಯಲ್ಲಿ 47, ಡೆಲ್ಲಿ ಪಬ್ಲಿಕ್ ಶಾಲೆ (ಉತ್ತರ) 119, ಡೆಲ್ಲಿ ಪಬ್ಲಿಕ್ ಶಾಲೆ (ಪಶ್ಚಿಮ) 135, ಚೈತನ್ಯ ಟೆಕ್ನೋ ಶಾಲೆ 42, ಐಟಿಐ ಸೆಂಟ್ರಲ್ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಪೂರ್ಣಾಂಕ ಗಳಿಸಿದ್ದಾರೆ.

ಕರ್ನಾಟಕ, ತೆಲಂಗಾಣ, ತಮಿಳುನಾಡು ಮುಂತಾದ ರಾಜ್ಯಗಳನ್ನು ಒಳಗೊಂಡ ಈ ವಲಯದಲ್ಲಿ 1,78, 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry