ಚೀನಾ ಹೆಲಿಕಾಪ್ಟರ್‌ಗಳ ಹಾರಾಟ: ತನಿಖೆಗೆ ಆದೇಶ

7

ಚೀನಾ ಹೆಲಿಕಾಪ್ಟರ್‌ಗಳ ಹಾರಾಟ: ತನಿಖೆಗೆ ಆದೇಶ

Published:
Updated:
ಚೀನಾ ಹೆಲಿಕಾಪ್ಟರ್‌ಗಳ ಹಾರಾಟ: ತನಿಖೆಗೆ ಆದೇಶ

ನವದೆಹಲಿ: ಚೀನಾದ ಸೇನಾ ಪಡೆಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಭಾರತೀಯ ವಾಯುಪಡೆಗೆ ಸೇರಿದ ಪ್ರದೇಶದೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಛಾಯಾಚಿತ್ರಗಳನ್ನು ಸೆರೆಹಿಡಿದ ಪ್ರಕರಣ ವರದಿಯಾಗಿದೆ.

ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಚೀನಾ ಪಡೆಯ ಹೆಲಿಕಾಪ್ಟರ್‌ಗಳು ಭಾರತೀಯ ವಾಯುನೆಲೆ ಪ್ರವೇಶಿಸಿದ ನಾಲ್ಕನೇ ಪ್ರಕರಣ ಇದಾಗಿದೆ.

ವಾಯುದಾಳಿ ನಡೆಯುವ ಜೀಬ್ರಾ ಸರಣಿಯ ಹೆಲಿಕಾಪ್ಟರ್‌ಗಳು ಐದು ನಿಮಿಷಗಳ ಕಾಲ ಹಾರಾಟ ನಡೆಸಿವೆ. ಆಯಾಕಟ್ಟಿನ ಸ್ಥಳದ ಛಾಯಾಚಿತ್ರಗಳನ್ನು ಸೆರೆಹಿಡಿದು ಚೀನಾದ ಗಡಿಯತ್ತ ತೆರಳಿವೆ. ಈ ಬಗ್ಗೆ ಭಾರತೀಯ ವಾಯುಪಡೆಯು ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದಿನ ಪ್ರಕರಣಗಳಲ್ಲೂ ಚೀನಾದ ಹೆಲಿಕಾಪ್ಟರ್‌ಗಳು ಭಾರತೀಯ ವಾಯುನೆಲೆಗೆ ಸೇರಿದ 4.5 ಕಿ.ಮೀ. ದೂರದವರೆಗೂ ಪ್ರವೇಶಿಸಿದ್ದವು. ಇಲ್ಲಿಯವರೆಗೂ ತನ್ನ ಗಡಿ ಇದೆ ಎಂದು ಚೀನಾ ವಾದಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry