ಸಿಆರ್‍‍ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಲು ಯತ್ನಿಸಿದ ನಾಲ್ವರು ಉಗ್ರರ ಹತ್ಯೆ

7

ಸಿಆರ್‍‍ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಲು ಯತ್ನಿಸಿದ ನಾಲ್ವರು ಉಗ್ರರ ಹತ್ಯೆ

Published:
Updated:
ಸಿಆರ್‍‍ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಲು ಯತ್ನಿಸಿದ ನಾಲ್ವರು ಉಗ್ರರ ಹತ್ಯೆ

ನವದೆಹಲಿ: ಜಮ್ಮು ಕಾಶ್ಮೀರದ ಬಂಡೀಪೊರ ಜಿಲ್ಲೆಯ ಸುಂಬಾಲ್‍ನಲ್ಲಿರುವ ಕೇಂದ್ರ ಸಶಸ್ತ್ರ ಮೀಸಲು ಪಡೆ (ಸಿಆರ್‍‍ಪಿಎಫ್) ಶಿಬಿರದ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ.

ಸೋಮವಾರ ಮುಂಜಾನೆ 4.10ರ ವೇಳೆ ಶಸ್ತ್ರಾಸ್ತ್ರಧಾರಿಗಳಾದ ಉಗ್ರರು ಸಿಆರ್‍‍ಪಿಎಫ್‍ನ 45ನೇ ಬೆಟಾಲಿಯನ್ ಶಿಬಿರದ ಮೇಲೆ ದಾಳಿ ನಡೆಸುವ ಸಲುವಾಗಿ ಸೆಂಟ್ರಿ ಪೋಸ್ಟ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ದಾಳಿ ನಡೆಸಲು ಯತ್ನಿಸಿದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಮೂಲಕ ಆತ್ಮಹತ್ಯಾ ದಾಳಿ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಉಗ್ರರ ಬಳಿಯಲ್ಲಿದ್ದ ಎಕೆ-47 ರೈಫಲ್,  ಒಂದು ಯುಬಿಜಿಎಲ್(Underbarrel Grenade Launcher) ಮತ್ತು ಇನ್ನು ಕೆಲವು ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲೀಗ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry