ಪ್ರಯಾಣಿಕ ವಾಹನಕ್ಕೆ ಬೇಡಿಕೆ

7

ಪ್ರಯಾಣಿಕ ವಾಹನಕ್ಕೆ ಬೇಡಿಕೆ

Published:
Updated:
ಪ್ರಯಾಣಿಕ ವಾಹನಕ್ಕೆ ಬೇಡಿಕೆ

ನವದೆಹಲಿ: ಪ್ರಯಾಣಿಕ ವಾಹನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿ, ಹೋಂಡಾ ಕಾರ್ಸ್‌ ಮತ್ತು ಮಹೀಂದ್ರಾ ಕಂಪೆನಿಗಳು ಮೇ ತಿಂಗಳಿನಲ್ಲಿ ಎರಡಂಕಿ ಪ್ರಗತಿ ಸಾಧಿಸಿವೆ.

ಪ್ರಮುಖ ಕಂಪೆನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) 1.31 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು ಶೇ 15.5 ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ಆರಂಭಿಕ ಹಂತದ ಕಾರುಗಳು, ಕಾಂಪ್ಯಾಕ್ಟ್‌ ಹ್ಯಾಚ್‌ಬ್ಯಾಕ್‌ ಮತ್ತು ಯುಟಿಲಿಟಿ ವಾಹನಗಳ ಮಾರಾಟ ಹೆಚ್ಚಾಗಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಕಂಪೆನಿ ತಿಳಿಸಿದೆ.

ಯುಟಿಲಿಟಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪೆನಿಯು 40,602 ವಾಹನಗಳನ್ನು ಮಾರಾಟ ಮಾಡಿದ್ದು ಶೇ 11 ರಷ್ಟು ಪ್ರಗತಿ ಸಾಧಿಸಿದೆ.

ಜುಲೈ 1 ರಿಂದ ಜಿಎಸ್‌ಟಿ ಜಾರಿಯಾಗುತ್ತಿದ್ದು, ವಾಹನ ಉದ್ಯಮಕ್ಕೆ ಅನುಕೂಲವಾಗುವ ವಿಶ್ವಾಸವಿದೆ ಎಂದು ಮಹೀಂದ್ರಾ ಅಧ್ಯಕ್ಷ ರಾಜನ್ ವಢೇರಾ ಅವರು ಹೇಳಿದ್ದಾರೆ.

ಹೋಂಡಾ ಕಾರ್ಸ್ ಇಂಡಿಯಾದ ದೇಶಿ ಮಾರಾಟ ಶೇ 13.3 ರಷ್ಟು ಏರಿಕೆಯಾಗಿದೆ. ಫೋರ್ಡ್‌ ಇಂಡಿಯಾ ಶೇ 17 ರಷ್ಟು ಮಾರಾಟ ಪ್ರಗತಿ ಸಾಧಿಸಿದೆ. ಕೇಂದ್ರ ಸರ್ಕಾರ, ವಾಹನ ಉದ್ಯಮ ಪ್ರಗತಿಗೆ ಪೂರಕವಾದ ನಿರ್ಣಯಗಳನ್ನು  ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಕಂಪೆನಿಗಳು ಹೇಳಿವೆ.

ಮಾರಾಟ ಇಳಿಕೆ: ಟೊಯೊಟಾ ಮೋಟಾರ್‌ ಕಾರ್ಪೊರೇಷನ್‌ ಮಾರಾಟ ಶೇ 13 ರಷ್ಟು ಇಳಿಕೆ ಕಂಡಿದೆ.

ದ್ವಿಚಕ್ರ ವಾಹನ: ದ್ವಿಚಕ್ರ ವಾಹನ ವಿಭಾಗದಲ್ಲಿ ಹೀರೊ ಮೋಟೊ ಕಾರ್ಪ್‌ ಶೇ 9 ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ರಾಯಲ್ ಎನ್‌ಫೀಲ್ಡ್‌ ಮಾರಾಟ ಶೇ 25 ರಷ್ಟು ಹೆಚ್ಚಾಗಿದೆ. ಯಮಹಾ ಮೋಟಾರ್ ಇಂಡಿಯಾದ ಮಾರಾಟವು ಶೇ 11ರಷ್ಟು ಏರಿಕೆ ಕಂಡಿದೆ.

* ಉತ್ತಮ ಮುಂಗಾರಿನ ನಿರೀಕ್ಷೆ ಮತ್ತು ಗ್ರಾಮೀಣ ಭಾಗದಲ್ಲಿ ಹೂಡಿಕೆಗೆ ಆದ್ಯತೆ ನೀಡುತ್ತಿರುವು ದರಿಂದ ಬೇಡಿಕೆ ಹೆಚ್ಚಾಗಲಿದೆ

- ರಾಜನ್‌ ವಢೇರಾ, ಮಹೀಂದ್ರಾ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry