ಚೀನಾದಲ್ಲಿ ‘ದಂಗಲ್‌’ ಭರ್ಜರಿ ಯಶಸ್ಸು

7

ಚೀನಾದಲ್ಲಿ ‘ದಂಗಲ್‌’ ಭರ್ಜರಿ ಯಶಸ್ಸು

Published:
Updated:
ಚೀನಾದಲ್ಲಿ ‘ದಂಗಲ್‌’ ಭರ್ಜರಿ ಯಶಸ್ಸು

ಬೀಜಿಂಗ್‌: ಕಳೆದ ಮೇ 5ರಂದು ಚೀನಾದಲ್ಲಿ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಅಮಿರ್ ಖಾನ್‌ ಅಭಿನಯದ ‘ದಂಗಲ್‌’ ಚಿತ್ರವನ್ನು  ಇಲ್ಲಿಯ ಆಡಳಿತ ಪಕ್ಷವಾಗಿರುವ ಕಮ್ಯುನಿಸ್ಟ್‌ ಪಕ್ಷದ ನಾಯಕ ಲಿಯು ಯುನ್‌ಶಾನ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

‘ಇದು ಇತ್ತೀಚಿನ ವರ್ಷಗಳಲ್ಲಿನ ಚಿತ್ರಗಳ ಪೈಕಿ ಅತ್ಯಧಿಕ ಜನಪ್ರಿಯತೆ ಗಳಿಸಿರುವ ಚಿತ್ರ’ ಎಂದು ಹೊಗಳಿರುವ ಅವರು, ‘ಈ ಚಿತ್ರಕ್ಕೆ ನಮ್ಮ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಬೇಕು’ ಎಂದಿದ್ದಾರೆ.

ಚಿತ್ರವು ಚೀನಾದಲ್ಲಿ ಇಲ್ಲಿಯವರೆಗೆ ₹1,100 ಕೋಟಿ  ಗಳಿಸಿದೆ. ಚೀನಾದ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಬೃಹತ್‌ ಮೊತ್ತ ಗಳಿಸಿರುವ 33ನೇ ಚಿತ್ರ ಇದು ಎಂದು ಇತಿಹಾಸ ನಿರ್ಮಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry