ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಉದಾರ ಕೊಡುಗೆ ನೀಡಿ

7

ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಉದಾರ ಕೊಡುಗೆ ನೀಡಿ

Published:
Updated:
ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಉದಾರ ಕೊಡುಗೆ ನೀಡಿ

ಪ್ರಜಾವಾಣಿ – ಡೆಕ್ಕನ್‌ ಹೆರಾಲ್ಡ್‌ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸ್ಥಾಪಿಸಿರುವ ಟ್ರಸ್ಟ್‌, ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತ ಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್‌ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು ‘Deccan Herald-Prajavani Relief Trust’ ಹೆಸರಿಗೆ ಕಳುಹಿಸಬಹುದು.

ಆನ್‌ಲೈನ್‌ನಲ್ಲಿ www.prajavani.net/edurelief/index.html  ಮೂಲಕವೂ ಹಣ ವರ್ಗಾಯಿಸುವ ಸೌಲಭ್ಯ ಇದೆ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ನಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್‌ 80 ಜಿ ಅನ್ವಯ ಶೇ 50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ.

2017ರ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಮಾತ್ರ ಈ ನೆರವು ಕೋರಿ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ವಿಳಾಸ, ಮೊಬೈಲ್‌ ಸಂಖ್ಯೆ ಮತ್ತಿತರ ವಿವರಗಳಿರಬೇಕು. ಲಕೋಟೆ ಮೇಲೆ ‘ಶೈಕ್ಷಣಿಕ ನೆರವಿಗೆ ಅರ್ಜಿ’ ಎಂದು ಬರೆಯಬೇಕು.

ಸೂಚನೆ

ದೇಣಿಗೆ ನೀಡುವವರು ಲಕೋಟೆ ಮೇಲೆ ‘ಶೈಕ್ಷಣಿಕ ನೆರವಿಗೆ ಕೊಡುಗೆ’ ಎಂದು ನಮೂದಿಸಲು ಮನವಿ.

ವಿಳಾಸ

ಮ್ಯಾನೇಜರ್‌, ಡೆಕ್ಕನ್‌ ಹೆರಾಲ್ಡ್‌–

ಪ್ರಜಾವಾಣಿ ಪರಿಹಾರ ಟ್ರಸ್ಟ್‌,

ನಂ. 75, ಮಹಾತ್ಮ ಗಾಂಧಿ ರಸ್ತೆ,

ಬೆಂಗಳೂರು–560001.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry