ಉತ್ತರಪ್ರದೇಶ: ಶೀಘ್ರದಲ್ಲೇ ವಿವಾಹ ನೋಂದಣಿ ಕಡ್ಡಾಯ

7

ಉತ್ತರಪ್ರದೇಶ: ಶೀಘ್ರದಲ್ಲೇ ವಿವಾಹ ನೋಂದಣಿ ಕಡ್ಡಾಯ

Published:
Updated:
ಉತ್ತರಪ್ರದೇಶ: ಶೀಘ್ರದಲ್ಲೇ ವಿವಾಹ ನೋಂದಣಿ ಕಡ್ಡಾಯ

ಲಖನೌ: ಉತ್ತರಪ್ರದೇಶದಲ್ಲಿ ಶೀಘ್ರದಲ್ಲಿಯೇ ಮದುವೆ ನೋಂದಣಿ ಕಡ್ಡಾಯವಾಗಲಿದ್ದು, ಇದು ಎಲ್ಲ ಧರ್ಮದವರಿಗೂ ಅನ್ವಯವಾಗಲಿದೆ.

ಇದಕ್ಕೆ ಸಂಬಂಧಿಸಿದ ಮಸೂದೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದು ಉತ್ತರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೀಟಾ ಬಹುಗುಣ ಜೋಶಿ ತಿಳಿಸಿದ್ದಾರೆ.

ಮದುವೆ ನೋಂದಣಿ ಮಾಡಿಸಿ ಪ್ರಮಾಣ ಪತ್ರ ಪಡೆಯದೆ ಇದ್ದರೆ ದಂಪತಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ.

‘ಸುಪ್ರೀಂಕೋರ್ಟ್ ನಿರ್ದೇಶನದಂತೆ ಮದುವೆ ನೋಂದಣಿ ಕಡ್ಡಾಯವಾಗಿದೆ. ನಾವು ಅದನ್ನು ಪಾಲಿಸುತ್ತಿದ್ದೇವೆ’ ಎಂದು ಅವರು

ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry