ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬ್ಯಾಂಕ್ ಖಾತೆಗೆ ಬಂತು ₹1 ಬೆಳೆಹಾನಿ ಪರಿಹಾರ!

Last Updated 9 ಜೂನ್ 2017, 9:37 IST
ಅಕ್ಷರ ಗಾತ್ರ

ತುಮಕೂರು: ಬರಕ್ಕೆ ತತ್ತರಿಸಿ ಬೆಳೆ ಹಾನಿ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರ ಬ್ಯಾಂಕ್‌ ಖಾತೆಗೆ ಸರ್ಕಾರ ಹಾಕಿದ್ದು ಕೇವಲ ₹ 1!

ಈ ₹1 ಬೆಳೆಹಾನಿ ಪರಿಹಾರ ಮೊತ್ತವನ್ನು ಕಂದಾಯ ಇಲಾಖೆಯು ರೈತರ ಬ್ಯಾಂಕ್‌ ಖಾತೆಗೆ ಜೂ.6 ರಂದು ಜಮೆ ಮಾಡಿದೆ. ಹೀಗೆ ₹1 ಬೆಳೆಹಾನಿ ಪರಿಹಾರ ಪಡೆದ ರೈತ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯ ಸಿರಿವರ ಗ್ರಾಮದ ಶಿವರಾಮಯ್ಯ.

‘ಒಟ್ಟು 1 ಎಕರೆ 30 ಗುಂಟೆ ಜಮೀನಿನಲ್ಲಿ (ಸರ್ವೆ ನಂಬರ್ 111/4ರಲ್ಲಿ 31 ಗುಂಟೆ, 111/3ಎನಲ್ಲಿ 22 ಗುಂಟೆ, 138/1ಎ–1ರಲ್ಲಿ 6 ಗುಂಟೆ) ರಾಗಿ ಬಿತ್ತನೆ ಮಾಡಿದ್ದೆ. ಮಳೆ ಇಲ್ಲದೇ ಬೆಳೆ ಒಣಗಿ ಹೋಯಿತು. ವರ್ಷಪೂರ್ತಿ ನಯಾಪೈಸೆ ಬೆಳೆಯೂ ಇಲ್ಲ. ಕನಿಷ್ಠ ಬೆಳೆಹಾನಿ ಲಭಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಎಕರೆಗೆ ₹ 6 ಸಾವಿರ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಕೇವಲ ₹ 1 ಪರಿಹಾರ ಬಂದಿದೆ’ ಎಂದು ರೈತ ಶಿವರಾಮಯ್ಯ ಸಮಸ್ಯೆ ಹೇಳಿಕೊಂಡರು.

‘ಗ್ರಾಮಲೆಕ್ಕಾಧಿಕಾರಿಗೆ ವಿಷಯ ಗಮನಕ್ಕೆ ತರಲಾಗಿದೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ನನ್ನಂತೆಯೇ ಬೇರೆ ರೈತರು ಬೆಳೆಹಾನಿ ಪರಿಹಾರ ಹೆಚ್ಚು ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡವರು ನಮ್ಮೂರಲ್ಲಿ ಇದ್ದಾರೆ. ಅವರಿಗೂ ಹೆಚ್ಚೇನೂ ಬಂದಿಲ್ಲ. ₹ 300, ₹500, ₹800 ಮೊತ್ತವನ್ನು ಬ್ಯಾಂಕ್ ಖಾತೆಗೆ ಹಾಕಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT