ಪ್ಯಾನ್‌ ಕಾರ್ಡ್‌ ಜೊತೆ ಆಧಾರ್‌ ಸಂಖ್ಯೆ ಜೋಡಣೆಗೆ ಸುಪ್ರೀಂನಿಂದ ತಾತ್ಕಾಲಿಕ ತಡೆ

7

ಪ್ಯಾನ್‌ ಕಾರ್ಡ್‌ ಜೊತೆ ಆಧಾರ್‌ ಸಂಖ್ಯೆ ಜೋಡಣೆಗೆ ಸುಪ್ರೀಂನಿಂದ ತಾತ್ಕಾಲಿಕ ತಡೆ

Published:
Updated:
ಪ್ಯಾನ್‌ ಕಾರ್ಡ್‌ ಜೊತೆ ಆಧಾರ್‌ ಸಂಖ್ಯೆ ಜೋಡಣೆಗೆ ಸುಪ್ರೀಂನಿಂದ ತಾತ್ಕಾಲಿಕ ತಡೆ

ನವದೆಹಲಿ:  ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಆಧಾರ್ ಕಡ್ಡಾಯ ಎಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವವರು ಆಧಾರ್ ಸಂಖ್ಯೆ ಸಲ್ಲಿಸಬೇಕಾದ್ದು ಅನಿವಾರ್ಯ. ಆದರೆ, ಸದ್ಯ ಆಧಾರ್‌ ಸಂಖ್ಯೆ ಹೊಂದಿಲ್ಲದವರೂ ಆದಾಯ ತೆರಿಗೆ ರಿಟರ್ಸ್‌ ಸಲ್ಲಿಸಬಹುದು ಎಂದು ಕೋರ್ಟ್‌ ಹೇಳಿದೆ.

ನಾಗರಿಕರ ಬಳಿ ಆದಾರ್‌ ಕಾರ್ಡ್‌ ಇದ್ದರೆ ಪ್ಯಾನ್‌ಗೆ ಜೋಡಣೆ ಮಾಡಿಕೊಳ್ಳಬಹುದು. ಆದರೆ ಸರ್ಕಾರ ಕಡ್ಡಾಯವಾಗಿ ಪ್ಯಾನ್‌ಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವಂತೆ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಎ. ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಆಧಾರ್‌ ಕಡ್ಡಾಯದ ಬಗ್ಗೆ ಸಾಂವಿಧಾನಿಕ ಪೀಠದಲ್ಲಿ ವಿವಿಧ ಖಾಸಗಿ ಅರ್ಜಿಗಳ ವಿಚಾರಣೆ ನಡೆಯುತ್ತಿದ್ದು ಅಂತಿಮ ತೀರ್ಪು ಹೊರಬರುವವರೆಗೂ ಆಧಾರ್‌ ಸಂಖ್ಯೆ ಜೋಡಣೆಯನ್ನು ಕಡ್ಡಾಯ ಮಾಡುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry