ಜುಲೈ 1ರಿಂದ ವಿಶ್ವ ದರ್ಜೆಯ ಮಹಾರಾಜ ರೈಲು ಸಂಚಾರ

7

ಜುಲೈ 1ರಿಂದ ವಿಶ್ವ ದರ್ಜೆಯ ಮಹಾರಾಜ ರೈಲು ಸಂಚಾರ

Published:
Updated:
ಜುಲೈ 1ರಿಂದ ವಿಶ್ವ ದರ್ಜೆಯ ಮಹಾರಾಜ ರೈಲು ಸಂಚಾರ

ಬೆಂಗಳೂರು: ‘ದಕ್ಷಿಣ ಭಾರತದ ಪ್ರವಾಸಿ ತಾಣಗಳ ವೀಕ್ಷಣೆಗೆ ಐಷಾರಾಮಿ ಮಹಾರಾಜ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರವನ್ನು ಜುಲೈ 1ರಿಂದ ಆರಂಭಿಸಲಾಗುತ್ತಿದೆ’ ಎಂದು ಭಾರತೀಯ ರೈಲ್ವೆ ಅಡುಗೆದಾರ ಮತ್ತು ಪ್ರವಾಸಿ ರೈಲ್ವೆ ಅಡುಗೆದಾರ ಪ್ರವಾಸೋದ್ಯಮ ನಿಗಮ ಗ್ರೂಪ್ ಜನರಲ್ ಮ್ಯಾನೇಜರ್ ಎಸ್.ಎಸ್. ಜಗನ್ನಾಥನ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜ ಎಕ್ಸ್‌ಪ್ರೆಸ್ ರೈಲು ‘ದಕ್ಷಿಣ ಆಭರಣಗಳು’ ಎಂಬ ಹೆಸರಿನೊಂದಿಗೆ ತನ್ನ ಪ್ರವಾಸಿ ಸಂಚಾರವನ್ನು ಮುಂಬೈಯಿಂದ ಆರಂಭಿಸಿ ತಮಿಳುನಾಡಿನ ತಿರುವನಂತಪುರ, ಚೆಟ್ಟಿನಾಡು, ತಂಜಾವೂರು, ಮಹಾಬಲಿಪುರ ಮತ್ತು ಕರ್ನಾಟಕದ ಮೈಸೂರು, ಹಂಪಿಯನ್ನು ಸಂಚರಿಸಿ ಗೋವಾವನ್ನು ತಲುಪಲಿದೆ’ ಎಂದು ತಿಳಿಸಿದರು.

‘ವಿಶ್ವ ದರ್ಜೆಯ ಪ್ರಯಾಣಿಕ ಸೇವೆಗಳನ್ನು ಒದಗಿಸುವ = ಮಹಾರಾಜ ವಿಶೇಷ ರೈಲಿನಲ್ಲಿ 23 ಬೋಗಿಗಳಿದ್ದು, 88 ಪ್ರಯಾಣಿಕರಿಗೆ ಸ್ಥಳಾವಕಾಶವಿದೆ. ದಕ್ಷಿಣ ಭಾರತದ ವಿಶೇಷ ರೈಲಿನ ಪ್ರವಾಸವು ದಿನಗಳ ಅವಧಿಯ 8 ಹಗಲು, 7 ರಾತ್ರಿಗಳನ್ನು ಹೊಂದಿರಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry