ನಗರದಲ್ಲೂ ಪ್ಲಾಸ್ಟಿಕ್ ಸಕ್ಕರೆ?

7

ನಗರದಲ್ಲೂ ಪ್ಲಾಸ್ಟಿಕ್ ಸಕ್ಕರೆ?

Published:
Updated:
ನಗರದಲ್ಲೂ ಪ್ಲಾಸ್ಟಿಕ್ ಸಕ್ಕರೆ?

ತುಮಕೂರು: ಎಲ್ಲೆಡೆ ಪ್ಲಾಸ್ಟಿಕ್ ಅಕ್ಕಿ ಬಂದಿದೆಯಂತೆ, ಸಕ್ಕರೆ ಬಂದಿದೆಯಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮಾತಿಗೆ ಇನ್ನಷ್ಟು ಪುಷ್ಟಿ ಎಂಬಂತೆ ನಗರದ ಅಂತರಸನಹಳ್ಳಿ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಗ್ರಾಹಕರು ಖರೀದಿಸಿದ ಸಕ್ಕರೆಯಲ್ಲಿ ಪ್ಲಾಸ್ಟಿಕ್ ಅಂಶ ಇರುವ ಹರಳುಗಳು ಗೋಚರಿಸಿವೆ. ಮೊದಲು ಚಹಾಕ್ಕೆ ಸಕ್ಕರೆ ಹಾಕಿದಾಗ ಗ್ರಾಹಕರಿಗೆ ಗೊತ್ತಾಗಿಲ್ಲ. ಜ್ಯೂಸ್ ಮಾಡಲು ಸಕ್ಕರೆ ಹಾಕಿದಾಗ ಸಕ್ಕರೆಯಲ್ಲಿ ಪ್ಲಾಸ್ಟಿಕ್‌ ಅಂಶ ಇರುವಂತಹ ಹರಳುಗಳು ಗೋಚರಿಸಿದವು. ಇದರಿಂದ ಗ್ರಾಹಕ ತಾನು ಖರೀದಿಸಿದ ಅಂಗಡಿಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಆಹಾರ ಸುರಕ್ಷತಾ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಅಧಿಕಾರಿ ಹೇಳಿಕೆ: ಉದಯ್‌ಕುಮಾರ್ ಎಂಬುವರು ಈ ಸಕ್ಕರೆ ಖರೀದಿಸಿದ್ದರಂತೆ. ಅವರು ಕೊಟ್ಟ ಸಕ್ಕರೆ ಮತ್ತು ಅಂಗಡಿಯಲ್ಲಿನ ಸಕ್ಕರೆಯನ್ನು ಪರಿಶೀಲಿಸಲಾಗಿದೆ. ಬೆಂಗಳೂರಿನಲ್ಲಿರುವ ಪ್ರಯೋಗಾಲಯಕ್ಕೆ ಸಕ್ಕರೆ ಮಾದರಿಯನ್ನು ಕಳುಹಿಸಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ನಾಗರಾಜ್ ‘ಪ್ರಜಾವಾಣಿ’ಗೆ  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry