ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳು… ನೆರಳುಗಳು

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಮೇ ತಿಂಗಳು ಇನ್ನೊಂದು ಬೇಸಗೆಯ ಘಮ. ಆಧುನಿಕ ತಂತ್ರಜ್ಞಾನವು ಮನೆಯೊಳಗೆ ತಣ್ಣಗಿನ ವಾತಾವರಣ ಕಲ್ಪಿಸಲು ಒಂದಿಷ್ಟು ಕೊಡುಗೆ ನೀಡಿದೆ. ಹೊರಗೆ ಹೋದರೆ ಮರದ ನೆರಳಿನ ಮುಂದೆ ಬೇರೆ ತಂಪು ಇರಲು ಸಾಧ್ಯವಿಲ್ಲ.

ಉದ್ಯಾನಗಳಲ್ಲಿ ಕೆಲವು ಮರಗಳನ್ನು ಅವು ವಿಶಾಲ ನೆರಳನ್ನು ಕೊಡಲಿ ಎಂಬ ಉದ್ದೇಶದಿಂದ ನಿರ್ದಿಷ್ಟ ಕ್ರಮದಲ್ಲಿ ಬೆಳೆಸುತ್ತಾರೆ. ಅಂಥ ಮರಗಳನ್ನು ‘ನೆರಳಿನ ಮರಗಳು’ ಎಂದೇ ಕರೆಯುತ್ತಾರೆ.

ಭಾರತೀಯ ಸಂಸ್ಕೃತಿಯಲ್ಲಿ ಆಲದ ಮರಕ್ಕೆ ಸರಿಸಮಾನವಾದುದು ಇನ್ನೊಂದಿಲ್ಲ. ಅದರ ಅದ್ಭುತವಾದ ರೆಂಬೆಕೊಂಬೆಗಳು 100 ಮೀಟರ್‌ನಷ್ಟು ದೊಡ್ಡ ವ್ಯಾಪ್ತಿಯಲ್ಲಿ ನೆರಳು ನೀಡಬಲ್ಲವು. ಭಾರತದ ಹಳ್ಳಿಗಳಲ್ಲಿ ಅದು ಸಮೃದ್ಧಿ ಹಾಗೂ ಶಾಂತಿಯ ಸಂಕೇತವೂ ಹೌದು. ಕೋಲ್ಕತ್ತದಲ್ಲಿ ಇರುವ ‘ಗ್ರೇಟ್ ಬ್ಯಾನ್ಯನ್ ಟ್ರೀ’ ನಮ್ಮ ದೇಶದಲ್ಲಿನ ಅತಿ ದೊಡ್ಡ ಆಲದಮರಗಳಲ್ಲೊಂದು. 16,187 ಚದರ ಮೀಟರ್‌ನಷ್ಟು ವಿಶಾಲ ವ್ಯಾಪ್ತಿಯ ನೆರಳನ್ನು ಅದು ನೀಡುತ್ತದೆ.

ಅರಳಿಮರ ಭಾರತದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಅದರ ನೆರಳು ಬಲು ತಂಪು. ಮರದ ಎಲೆಗಳಲ್ಲಿನ ಹರಿತ್ತು ಅಂಥ ತಂಪು ನೀಡುವ ಗುಣ ಪಡೆದಿದೆ. ಹಳ್ಳಿಗಳಲ್ಲಿ ಸಂವಾದ, ಹರಟೆಗೆ ಅರಳಿಮರದ ನೆರಳಿನ ತಾಣ ಆಪ್ಯಾಯಮಾನ.

ಗುಲ್‌ಮೊಹರ್ ಕೂಡ ರಸ್ತೆಬದಿಯಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಅದು ಬೇಸಿಗೆಯವರೆಗೆ ಅಲಕ್ಷ್ಯಕ್ಕೆ ಈಡಾಗುತ್ತದೆ. ಬೇಸಿಗೆಯಲ್ಲಿ ಹೂಬಿಟ್ಟಾಗ, ಕೆಂಪು ದಳಗಳು ಕಣ್ಣುಕೋರೈಸುತ್ತವೆ. ಮೇ ತಿಂಗಳ ನೀಲಿ ಮೋಡದ ಹಿನ್ನೆಲೆಯಲ್ಲಂತೂ ಈ ಹೂಗಳು ಅತ್ಯಾಕರ್ಷಕವಾಗಿ ಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT