ದಾಲ್‌ ಸರೋವರಕ್ಕೆ ಕಾರು ಪಲ್ಟಿ: ‘ದಂಗಲ್‌’ ನಟಿ ಝೈರಾ ಅಪಾಯದಿಂದ ಪಾರು

7

ದಾಲ್‌ ಸರೋವರಕ್ಕೆ ಕಾರು ಪಲ್ಟಿ: ‘ದಂಗಲ್‌’ ನಟಿ ಝೈರಾ ಅಪಾಯದಿಂದ ಪಾರು

Published:
Updated:
ದಾಲ್‌ ಸರೋವರಕ್ಕೆ ಕಾರು ಪಲ್ಟಿ: ‘ದಂಗಲ್‌’ ನಟಿ ಝೈರಾ ಅಪಾಯದಿಂದ ಪಾರು

ಶ್ರೀನಗರ: ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದಲ್ಲಿ ಕುಸ್ತಿಪಟು ಗೀತಾ ಫೋಗಟ್ ಪಾತ್ರ ನಿರ್ವಹಿಸಿದ್ದ ಕಾಶ್ಮೀರಿ ಹುಡುಗಿ ಝೈರಾ ವಾಸಿಂ ಅವರು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ರಾತ್ರಿ ಶ್ರೀನಗರದಲ್ಲಿ ಅಪಘಾತಕ್ಕೀಡಾಗಿದ್ದು, ಝೈರಾ ಅಪಾಯದಿಂದ ಪಾರಾಗಿದ್ದಾರೆ.

ಝೈರಾ ಪ್ರಯಾಣಿಸುತ್ತಿದ್ದ ಕಾರು ರಾತ್ರಿ 9ರ ಸುಮಾರಿಗೆ ಪಲ್ಟಿಯಾಗಿ, ದಾಲ್ ಸರೋವರಕ್ಕೆ ಬಿದ್ದಿದೆ. ಕಾರು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಝೈರಾ ಮತ್ತು ಆಕೆಯ ಸ್ನೇಹಿತ ಆರಿಫ್ ಅಹಮದ್‌ ಅವರನ್ನು ರಕ್ಷಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಘಟನೆಯಲ್ಲಿ ಅವರಿಬ್ಬರೂ ಬದುಕುಳಿದಿದ್ದಾರೆ. ಆದರೆ, ಝರಾ ಜತೆಗಿದ್ದ ಸ್ಥಳೀಯ ಪಿಡಿಪಿ ಮುಖಂಡನ ಮಗ ಆರಿಫ್‌ಗೆ ಹಲವು ಗಾಯಗಳಾಗಿವೆ’ ಎಂದು ಸ್ಥಳೀಯರು ಹೇಳಿದ್ದಾರೆ.

ವಾಹನವು ಅತಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಚಾಲಕ ಅದರ ಮೇಲೆ ನಿಯಂತ್ರಣ ಕಳೆದುಕೊಂಡು ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾಗಿ ವರದಿಯಾಗಿದೆ.

ಅಮೀರ್‌ ಖಾನ್‌ ಅವರ ಬ್ಲಾಕ್‌ ಬಸ್ಟರ್‌ ಎನ್ನಲಾದ ‘ದಂಗಲ್‌’ ಚಿತ್ರದಲ್ಲಿ ಕುಸ್ತಿಪಟುವಾಗಿ ಅಭಿನಯಿಸಿ ಗೀತಾ ಪೋಗಟ್‌ ಪಾತ್ರಕ್ಕೆ ಝೈರಾ ಖ್ಯಾತಿ ತಂದುಕೊಟ್ಟಿದ್ದರು. ಜನವರಿಯಲ್ಲಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಭೇಟಿಯಾದ ಬಳಿಕ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಝೈರಾ ಸುದ್ದಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry