ನವೀಕರಣಕ್ಕಾಗಿ ಹರಾಜಾಗಲಿದೆ ಬೆಂಗಳೂರು ರೈಲು ನಿಲ್ದಾಣ

7

ನವೀಕರಣಕ್ಕಾಗಿ ಹರಾಜಾಗಲಿದೆ ಬೆಂಗಳೂರು ರೈಲು ನಿಲ್ದಾಣ

Published:
Updated:
ನವೀಕರಣಕ್ಕಾಗಿ ಹರಾಜಾಗಲಿದೆ ಬೆಂಗಳೂರು ರೈಲು ನಿಲ್ದಾಣ

ನವದೆಹಲಿ: ಬೆಂಗಳೂರು ರೈಲು ನಿಲ್ದಾಣ ಸೇರಿದಂತೆ ದೇಶದ ಪ್ರಮುಖ 25 ರೈಲು ನಿಲ್ದಾಣಗಳನ್ನು ಸರ್ಕಾರಿ–ಖಾಸಗಿ ಸಹಭಾಗಿತ್ವದ ಯೋಜನೆಯಡಿ (ಪಿಪಿಪಿ) ನವೀಕರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಇದಕ್ಕಾಗಿ ನಿಲ್ದಾಣಗಳನ್ನು ಆನ್‌ಲೈನ್‌ ಮೂಲಕ ಹರಾಜು ಹಾಕಲು ಇಲಾಖೆ ನಿರ್ಧರಿಸಿದೆ.

ಮೊದಲಿಗೆ ಉತ್ತಪ್ರದೇಶದ ಕಾನ್ಪುರ ಮತ್ತು ಅಲಹಾಬಾದ್ ರೈಲು ನಿಲ್ದಾಣಗಳನ್ನು ಕ್ರಮವಾಗಿ ₹ 200 ಕೋಟಿ ಮತ್ತು ₹ 150 ಕೋಟಿಗೆ ಹರಾಜು ಹಾಕಲು ನಿರ್ಧರಿಸಲಾಗಿದೆ. ಜೂನ್ 28ರಂದು ಆನ್‌ಲೈನ್ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸಕ್ತಿ ಹೊಂದಿರುವ ಕಂಪೆನಿಗಳು ರೈಲ್ವೆ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಜೂನ್ 30ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣ, ಪುಣೆ, ಠಾಣೆ ಸೇರಿ 25 ರೈಲು ನಿಲ್ದಾಣಗಳ ನವೀಕರಣಕ್ಕೆ ಇಲಾಖೆ ಮುಂದಾಗಿದೆ.

ರೈಲು ನಿಲ್ದಾಣಗಳನ್ನು ಹರಾಜು ಹಾಕುವ ವಿಚಾರವಾಗಿ ಕಳೆದ ತಿಂಗಳು ರೈಲ್ವೆ ಸಚಿವ ಸುರೇಶ್ ಪ್ರಭು ಸುಳಿವು ನೀಡಿದ್ದರು. ಕನಿಷ್ಠ ₹ 30 ಸಾವಿರ ಕೋಟಿ ಹೂಡಿಕೆಯೊಂದಿಗೆ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry