ಪಂದ್ಯ ವೀಕ್ಷಿಸಲು ಬಂದಿದ್ದ ಮಲ್ಯಗೆ ‘ಕಳ್ಳ..ಕಳ್ಳ...’ ಎಂದು ಹೀಯಾಳಿಸಿದ ಪ್ರೇಕ್ಷಕರು

7

ಪಂದ್ಯ ವೀಕ್ಷಿಸಲು ಬಂದಿದ್ದ ಮಲ್ಯಗೆ ‘ಕಳ್ಳ..ಕಳ್ಳ...’ ಎಂದು ಹೀಯಾಳಿಸಿದ ಪ್ರೇಕ್ಷಕರು

Published:
Updated:
ಪಂದ್ಯ ವೀಕ್ಷಿಸಲು ಬಂದಿದ್ದ ಮಲ್ಯಗೆ ‘ಕಳ್ಳ..ಕಳ್ಳ...’ ಎಂದು ಹೀಯಾಳಿಸಿದ ಪ್ರೇಕ್ಷಕರು

ಲಂಡನ್‌: ಭಾನುವಾರ ನಡೆದ ಭಾರತ–ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಪ್ರವೇಶಿಸಿದ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಪ್ರೇಕ್ಷಕರು ಹೀಯಾಳಿಸಿದ ಪ್ರಸಂಗ ನಡೆದಿದೆ.

ವ್ಯಕ್ತಿಯೊಬ್ಬರೊಂದಿಗೆ ಸರ್‌ ಜಾಕ್‌ ಹೋಬ್ಸ್ ಗೇಟ್ ಮೂಲಕ ಮಲ್ಯ ಒಳಗೆ ಬರುತ್ತಿದ್ದಂತೆ ಕೆಲವು ಪ್ರೇಕ್ಷಕರು ‘ಕಳ್ಳ..ಕಳ್ಳ...’ ಎಂದು ಕೂಗಿದ್ದಾರೆ.

ಪ್ರೇಕ್ಷಕರೊಬ್ಬರು ಮಲ್ಯ ಬರುವುದನ್ನು ವಿಡಿಯೊ ಮಾಡಿದ್ದಾರೆ. ಅಷ್ಟರಲ್ಲಿ ಇನ್ನು ಕೆಲವರು ‘ಅಗೋ ಅಲ್ಲಿ ನೋಡು, ಒಳಗೆ ಕಳ್ಳ ಬರುತ್ತಿದ್ದಾನೆ...ಕಳ್ಳ...’ ಎಂದು ಕೂಗಿದ್ದಾರೆ ಎಂದು ವರದಿಯಾಗಿದೆ.

ಭಾರತದ ವಿವಿಧ ಬ್ಯಾಂಕ್‌ಗಳಿಗೆ ₹ 9 ಸಾವಿರ ಕೋಟಿಯಷ್ಟು ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ ಮಲ್ಯ ಕಳೆದ ವರ್ಷ ದೇಶ ಬಿಟ್ಟು ಹೋಗಿದ್ದರು. ಇತ್ತೀಚೆಗೆ ವಿರಾಟ್ ಕೊಹ್ಲಿ ಫೌಂಡೇಷನ್ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಬಂದಿದ್ದ ಮಲ್ಯ ಅವರಿಂದ ಭಾರತ ತಂಡದ ಆಟಗಾರರು ದೂರ ಉಳಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry