ಪಾಕಿಸ್ತಾನದ 11 ಕೈದಿಗಳ ಬಿಡುಗಡೆ ಮಾಡಿದ ಭಾರತ

7

ಪಾಕಿಸ್ತಾನದ 11 ಕೈದಿಗಳ ಬಿಡುಗಡೆ ಮಾಡಿದ ಭಾರತ

Published:
Updated:
ಪಾಕಿಸ್ತಾನದ 11 ಕೈದಿಗಳ ಬಿಡುಗಡೆ ಮಾಡಿದ ಭಾರತ

ನವದೆಹಲಿ: ಶಿಕ್ಷೆಯ ಅವಧಿ ಪೂರೈಸಿರುವ 11 ಪಾಕಿಸ್ತಾನಿ ಕೈದಿಗಳನ್ನು ಭಾರತ ಸೋಮವಾರ ಬಿಡುಗಡೆ ಮಾಡಿದೆ. ಅಟ್ಟಾರಿ–ವಾಘಾ ಗಡಿ ಮೂಲಕ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲಾಗಿದೆ.

ಪಾಕಿಸ್ತಾನದ ಸೇನೆ ಗಡಿಯಲ್ಲಿ ಪದೇಪದೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿರುವ ಮತ್ತು ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಗೂಢಚಾರ ಎಂಬ ಆರೋಪದಲ್ಲಿ ತನ್ನ ವಶದಲ್ಲಿಟ್ಟುಕೊಂಡಿರುವ ಪಾಕಿಸ್ತಾನ ಅವರಿಗೆ ಮರಣದಂಡನೆ ವಿಧಿಸಿದೆ. ಅಲ್ಲದೆ, ಭಾರತಕ್ಕೆ ಕಳುಹಿಸಿಕೊಡಲು ನಿರಾಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮುಂದಿನ ತೀರ್ಪು ನೀಡುವವರೆಗೂ ಜಾಧವ್ ಅವರಿಗೆ ಶಿಕ್ಷೆ ಜಾರಿಗೊಳಿಸಬಾರದು ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry