ಜಾನುವಾರು ಮಾರಾಟ ನಿರ್ಬಂಧ ವಿರುದ್ಧ ನಿರ್ಣಯ

7

ಜಾನುವಾರು ಮಾರಾಟ ನಿರ್ಬಂಧ ವಿರುದ್ಧ ನಿರ್ಣಯ

Published:
Updated:
ಜಾನುವಾರು ಮಾರಾಟ ನಿರ್ಬಂಧ ವಿರುದ್ಧ ನಿರ್ಣಯ

ಶಿಲ್ಲಾಂಗ್: ಪ್ರಾಣಿಗಳ ಮಾರುಕಟ್ಟೆಗಳಲ್ಲಿ ಮಾಂಸದ ಉದ್ದೇಶಕ್ಕಾಗಿ ಜಾನುವಾರುಗಳ ಮಾರಾಟ ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಮೇಘಾಲಯ ವಿಧಾನಸಭೆಯಲ್ಲಿ ಸೋಮವಾರ ನಿರ್ಣಯ ಅಂಗೀಕರಿಸಲಾಯಿತು.

‘ಆದೇಶವು ರಾಜ್ಯದ ಅರ್ಥವ್ಯವಸ್ಥೆ ಮತ್ತು ಜನರ ಆಹಾರ ಪದ್ಧತಿ ಮೇಲೆ ಪರಿಣಾಮ ಬೀರಲಿದೆ’ ಎಂದು ಹೇಳಿರುವ ನಿರ್ಣಯ, ತಕ್ಷಣ ಆದೇಶ ವಾಪಸ್‌ ಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಅವರು ಮಂಡಿಸಿದ್ದ ನಿರ್ಣಯವನ್ನು ಪಕ್ಷಭೇದ ಮರೆತು ಎಲ್ಲ ಪಕ್ಷಗಳೂ ಬೆಂಬಲಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry