ಚಿಮೂಗೆ ಅಲ್ಲಮಶ್ರೀ ಪ್ರಶಸ್ತಿ

7

ಚಿಮೂಗೆ ಅಲ್ಲಮಶ್ರೀ ಪ್ರಶಸ್ತಿ

Published:
Updated:
ಚಿಮೂಗೆ ಅಲ್ಲಮಶ್ರೀ ಪ್ರಶಸ್ತಿ

ಬೆಂಗಳೂರು: ‘ಕೊಳದ ಮಠವು ಕೊಡಮಾಡುವ ಅಲ್ಲಮಶ್ರೀ ಪ್ರಶಸ್ತಿಗೆ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಮಠಾಧೀಶ ಶಾಂತವೀರ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪ್ರಶಸ್ತಿಯು ₹10,000 ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಮಠದ ಆವರಣದಲ್ಲಿ ಜೂನ್ 14ರಂದು ನಡೆಯುವ ರೇಣುಕಾ, ಬಸವ ಮತ್ತು ಅಕ್ಕಮಹಾದೇವಿ ಅವರ ಜಯಂತೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತೇವೆ’ ಎಂದರು.

‘ರಾಜ್ಯ ಸರ್ಕಾರವೇ ಅಲ್ಲಮಪ್ರಭು ಪ್ರಶಸ್ತಿ ನೀಡಬೇಕು. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಾಲಯಗಳ ಅರ್ಚಕರಿಗೆ ತಿಂಗಳಿಗೆ ₹ 10,000 ಗೌರವಧನ ನೀಡಬೇಕು. ವೃದ್ಧ ಭಜನಾ ಕಲಾವಿದರಿಗೆ ಮಾಸಾಶನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry