ಕಿಡಿಗೇಡಿಗಳ ಕೃತ್ಯ: ರಸ್ತೆ ಪಕ್ಕ ಮಲಗಿದ ವ್ಯಕ್ತಿ ಮರ್ಮಾಂಗಕ್ಕೆ ಬೆಂಕಿ ವಿಡಿಯೊ ವೈರಲ್‌

7

ಕಿಡಿಗೇಡಿಗಳ ಕೃತ್ಯ: ರಸ್ತೆ ಪಕ್ಕ ಮಲಗಿದ ವ್ಯಕ್ತಿ ಮರ್ಮಾಂಗಕ್ಕೆ ಬೆಂಕಿ ವಿಡಿಯೊ ವೈರಲ್‌

Published:
Updated:
ಕಿಡಿಗೇಡಿಗಳ ಕೃತ್ಯ: ರಸ್ತೆ ಪಕ್ಕ ಮಲಗಿದ ವ್ಯಕ್ತಿ ಮರ್ಮಾಂಗಕ್ಕೆ ಬೆಂಕಿ ವಿಡಿಯೊ ವೈರಲ್‌

ಚೆನೈ: ರಸ್ತೆ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಆತನ ಮರ್ಮಾಂಗಕ್ಕೆ ಬೆಂಕಿ ಹಚ್ಚಿರುವ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೋಡಂಬಕ್ಕಂನಲ್ಲಿ ವಾಸವಿದ 50 ವರ್ಷದ ಜಾಫರ್‌ ಚೆನೈ ನಗರದ ಇಂಡಿಯಾ ಬ್ಯಾಂಕ್‌ ಮುಂಭಾಗ ಜೂನ್‌ 4ರಂದು ರಾತ್ರಿ ಕುಡಿದ ಅಮಲಿನಲ್ಲಿ ಮಲಗಿದ್ದಾರೆ. ಇದೇ ವೇಳೆ ಅಪ್ರಾಪ್ತರು ಸೇರಿದಂತೆ ಹಲವು ಯುವಕರು ಕಿರುಕುಳ ನೀಡಿದ್ದಾರೆ.

ಅವರಲ್ಲಿ ಒಬ್ಬ ಜಾಫರ್‌ ಅವರ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ್ದಾರೆ. ಜತೆಗೆ ಮನ ಬಂದಂತೆ ತಳಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಜಾಫರ್‌ ಮೇಲೇಳಲಾಗದೆ ಸ್ಥಳದಲ್ಲೇ ಒದ್ದಾಡಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry