ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌: ಎಬಿ ಡಿವಿಲಿಯರ್ಸ್‌ ಹಿಂದಿಕ್ಕಿದ ವಿರಾಟ್‌ ಕೊಹ್ಲಿ

7

ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌: ಎಬಿ ಡಿವಿಲಿಯರ್ಸ್‌ ಹಿಂದಿಕ್ಕಿದ ವಿರಾಟ್‌ ಕೊಹ್ಲಿ

Published:
Updated:
ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌: ಎಬಿ ಡಿವಿಲಿಯರ್ಸ್‌ ಹಿಂದಿಕ್ಕಿದ ವಿರಾಟ್‌ ಕೊಹ್ಲಿ

ದುಬೈ: ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಆಗ್ರಸ್ಥಾನಕ್ಕೆ ಏರಿದ್ದಾರೆ.

862 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ವಿರಾಟ್‌ ಕೊಹ್ಲಿ ಏಕದಿನ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಆಗ್ರಸ್ಥಾನ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ 861 ರೇಟಿಂಗ್ ಪಾಯಿಂಟ್‌, ಎಬಿ ಡಿವಿಲಿಯರ್ಸ್‌ 847 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂತರದ ಸ್ಥಾನ ಹೊಂದಿದ್ದಾರೆ.

ಆಗ್ರ 10 ಸ್ಥಾನಗಳ ಪೈಕಿ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಶಿಖರ್‌ ಧವನ್‌ 10ನೇ ಸ್ಥಾನ ಹೊಂದಿದ್ದಾರೆ.

ಸದ್ಯ ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಲಂಡನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry