ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವು ಮೊಬೈಲ್‌ಗಳಲ್ಲಿ ವಾಟ್ಸ್ಆ್ಯಪ್ ಬಂದ್!

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಕೆಲವು ಮೊಬೈಲ್‌ಗಳಲ್ಲಿ ವಾಟ್ಸ್ಆ್ಯಪ್ ಬಂದ್!

ನೀವು ಬಳಸುವ ಸ್ಮಾರ್ಟ್‌ಫೋನ್‌ ಹಳೆಯದಾಗಿದ್ದರೆ ನಿಮ್ಮ ವಾಟ್ಸ್ಆ್ಯಪ್ ಇದೇ ಜೂನ್ 30 ಕ್ಕೆ ಬಂದ್ ಆಗಲಿದೆ ! ಹೌದು, ಜನಪ್ರಿಯ ಮೆಸೆಜಿಂಗ್ ಸಾಮಾಜಿಕ ಜಾಲತಾಣವಾಗಿರುವ ವಾಟ್ಸ್ಆ್ಯಪ್ ಕಂಪೆನಿ ಇನ್ನು ಮುಂದೆ ಹಳೆಯ ಫೋನ್ ಗಳಲ್ಲಿ ವಾಟ್ಸ್ಆ್ಯಪ್ ರದ್ದಾಗಲಿದೆ ಎಂದು   ತಿಳಿಸಿದೆ. ಸದಾ ವಾಟ್ಸ್ಆ್ಯಪ್‌ನಲ್ಲಿ
ವ್ಯವಹರಿಸುವವರು ಹಾಗೂ ಮನರಂಜನೆ ಪಡೆಯುವವರು ತಮ್ಮ ಹಳೆಯ ಫೋನ್ ಅನ್ನು ಬದಲಾಯಿಸಿಕೊಳ್ಳುವುದು ಉತ್ತಮ! ಇಲ್ಲವಾದಲ್ಲಿ ಇದೇ ಜೂನ್ 30ಕ್ಕೆ ನಿಮ್ಮ ವಾಟ್ಸ್ಆ್ಯಪ್ ಬಂದ್ ಆಗಲಿದೆ.

ಸದ್ಯ ವಾಟ್ಸ್ಆ್ಯಪ್ ಐಪೋನ್, ವಿಂಡೋಸ್ ಫೋನ್, ಬ್ಲಾಕ್‌ಬೆರಿ, ಆಂಡ್ರಾಯ್ಡ್‌ ಮತ್ತು ನೋಕಿಯಾ ಮಾದರಿ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುತ್ತಿದೆ. ಈ ಮಾದರಿಯ ಹಳೆಯ ಫೋನ್‌ಗಳಲ್ಲಿ ಜೂನ್ 30 ರಿಂದ ವಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ. ವಿಂಡೋಸ್ 7 ಮೊಬೈಲ್‌ಗಳು, ಐಒಎಸ್ 6, ಬ್ಲಾಕ್‌ಬೆರಿ 10, ಬ್ಲಾಕ್‌ಬೆರಿ ಒಎಸ್, ನೋಕಿಯಾ ಸಿಂಬಿಯಾನ್, ನೋಕಿಯಾ ಎಸ್40 ಮತ್ತು ಆಂಡ್ರಾಯ್ಡ್‌ 2.1 ಮತ್ತು ಆಂಡ್ರಾಯ್ಡ್‌  2.2 ಮಾದರಿಯ ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಸೇವೆ ಸ್ಥಗಿತಗೊಳ್ಳಲಿದೆ. ಆದರೆ ಆಂಡ್ರಾಯ್ಡ್‌  ಜೆಲ್ಲಿಬಿನ್, ಆಂಡ್ರಾಯ್ಡ್‌  ಐಸ್ಕ್ರೀಮ್‌, ಸ್ಯಾಂಡ್‌ವಿಚ್ ತಂತ್ರಾಂಶ ಇರುವ ಆಂಡ್ರಾಯ್ಡ್‌   ಫೋನ್ ಬಳಕೆದಾರರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.

ಬಳಕೆದಾರರಿಗೆ ವಾಟ್ಸ್ಆ್ಯಪ್ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದು ಹಳೆಯ ಮಾದರಿಯ ಫೋನ್‌ಗಳು ಹೊಸ ವೈಶಿಷ್ಟ್ಯಗಳಿಗೆ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಹಳೆಯ ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಸೇವೆಯನ್ನು ಬಂದ್ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪೆನಿ ತಿಳಿಸಿದೆ.

***

ಟ್ರಾಯ್‌ನ ಮೈ ಕಾಲ್ ಆ್ಯಪ್…

ಮೊಬೈಲ್ ಕರೆಯ ಗುಣಮಟ್ಟವನ್ನು ತಿಳಿಯುವುದಕ್ಕಾಗಿ ಟ್ರಾಯ್ ಸಂಸ್ಥೆ ‘ಮೈಕಾಲ್ ಆ್ಯಪ್’ ಎಂಬ ನೂತನ ಆ್ಯಪ್ ಅಭಿವೃದ್ಧಿಪಡಿಸಿದೆ. ಇದರಿಂದ ದೂರಸಂಪರ್ಕ ಕಂಪೆನಿಯ ಗುಣಮಟ್ಟದ ಸೇವೆಯನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಸುಲಭವಾಗಿ ಗುರುತಿಸಲಿದೆ. ಆ ಮೂಲಕ ಕಳಪೆ ಗುಣಮಟ್ಟ ತೋರುವ ಕಂಪೆನಿಯ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ‘ಟ್ರಾಯ್’ ತಿಳಿಸಿದೆ.

ಮೊಬೈಲ್ ಫೋನ್ ಬಳಕೆದಾರರು ‘ ಮೈಕಾಲ್ ಆ್ಯಪ್’ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಇದು 3ಜಿ ಮತ್ತು 4ಜಿ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತದೆ. ಬಳಕೆದಾರರು ಆ್ಯಪ್ ಮೂಲಕ ಕರೆಯ ಗುಣಮಟ್ಟದ ಬಗ್ಗೆ ರೇಟಿಂಗ್ ನೀಡಬಹುದು. ಉದಾಹರಣೆಗೆ, ಗ್ರಾಹಕರೊಬ್ಬರ ಮೊಬೈಲ್ ಗೆ ಅವರ ಗೆಳೆಯರೊಬ್ಬರು ಕರೆ ಮಾಡಿ ಹತ್ತು ನಿಮಿಷಗಳ ಕಾಲ ಮಾತನಾಡುತ್ತಾರೆ. ಕರೆಯನ್ನು ಕಟ್ ಮಾಡಿದ ಕೂಡಲೇ ಮೊಬೈಲ್ ಪರದೆಯಲ್ಲಿ ಮೈಕಾಲ್ ಆ್ಯಪ್ ಕೆಲಸ ಮಾಡಲು ಆರಂಭಿಸುತ್ತದೆ. ಅರ್ಥಾತ್ ಅದು ಹಲವು ಪ್ರಶ್ನೆಗಳನ್ನು ಕೇಳುತ್ತದೆ.

ನೀವು ಕರೆ ಸ್ವೀಕರಿಸಿದಾಗ ಮನೆಯ ಹೊರಗಡೆ ಇರುವೀರಾ? ಮನೆಯ ಒಳಗಡೆ ಇದ್ದೀರಾ ಪ್ರಯಾಣ ಮಾಡುತ್ತಿದ್ದೀರಾ? ಕರೆ ಸ್ವೀಕರಿಸಿದ ಕೆಲವೇ ಸೆಕೆಂಡ್ ಗಳಲ್ಲಿ ಕರೆಯ ಸಂಪರ್ಕ ಕಡಿತವಾಯಿತೇ? ಕರೆ ಮಾಡಿದವರ ಧ್ವನಿ ಸಮರ್ಪಕವಾಗಿ ಕೇಳುತ್ತಿರಲಿಲ್ಲವೇ? ಎಂಬ ಪ್ರಶ್ನೆಗಳನ್ನು ಕೇಳಿ ಅಂತಿಮವಾಗಿ ಆ ದೂರಸಂಪರ್ಕ ಕಂಪೆನಿಗೆ ನಿಮ್ಮ ರೇಟಿಂಗ್  ಗುರುತಿಸಿ ಎಂದು ಕೇಳಲಾಗುತ್ತದೆ. ಗ್ರಾಹಕರು ನೀಡುವ ರೇಟಿಂಗ್ ಆಧಾರದ ಮೇಲೆ ಕರೆಯ ಗುಣಮಟ್ಟವನ್ನು ಮಾಪನ ಮಾಡಲಾಗುತ್ತದೆ. ಕಳಪೆ ಗುಣಮಟ್ಟ ನೀಡುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ‘ಟ್ರಾಯ್’ ತಿಳಿಸಿದೆ.

ಗೂಗಲ್ ಪ್ಲೇಸ್ಟೋರ್: MyCall app 

***

ಸಂಗೀತ ಆ್ಯಪ್…
ಬೆಂಗಳೂರು ಮೂಲದ ಆನ್ ಮೊಬೈಲ್ ಕಂಪೆನಿಯು ಅಮೆರಿಕದಲ್ಲಿ ಗ್ರಾಹಕ ಬಳಕೆಯ ಮನರಂಜನಾ ಆ್ಯಪ್ ಅನ್ನು ಬಿಡುಗಡೆ ಮಾಡುವುದಾಗಿ  ತಿಳಿಸಿದೆ. ಇದು ಆಂಡ್ರಾಯ್ಡ್‌  ಮತ್ತು ಐಒಎಸ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಪ್ರಸ್ತುತ ಆ್ಯಪ್‌ನ ಟ್ರಯಲ್ ಮಾದರಿ ಮಾರುಕಟ್ಟೆಯಲ್ಲಿ ಉಚಿತವಾಗಿ ಲಭ್ಯವಿದೆ. ಈ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಉಚಿತವಾಗಿ ಸಂಗೀತವನ್ನು ಆಲಿಸಬಹುದು.

ಪ್ರಪಂಚದಾದ್ಯಂತ 5 ಕೋಟಿಗೂ ಹೆಚ್ಚು ಹಾಡುಗಳನ್ನು ಈ ಆ್ಯಪ್ ಮೂಲಕ ಆಲಿಸಬಹುದು. ಇದರ ಜತೆಗೆ ಭವಿಷ್ಯ, ಭೂಗೋಲ, ನಕ್ಷೆಗಳ ಮೂಲಕ ಸಾಮಾನ್ಯ ಜ್ಞಾನವನ್ನು ತಿಳಿದುಕೊಳ್ಳಬಹುದು.  ಜುಲೈ ತಿಂಗಳಿಂದ ಈ ಆ್ಯಪ್ ಬಳಸುವ ಗ್ರಾಹಕರು ಹಣವನ್ನು ಪಾವತಿಸಬೇಕು ಎಂದು ಆನ್ ಮೊಬೈಲ್ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಗೂಗಲ್ ಪ್ಲೇಸ್ಟೋರ್: ONMO Express

***

ನಕಲಿ ಜಾಹೀರಾತು ಪತ್ತೆಹಚ್ಚುವ ಆ್ಯಪ್…
ಜಾಗತಿಕವಾಗಿ ಆನ್ ಲೈನ್ ಮಾರುಕಟ್ಟೆಯಲ್ಲಿ ನಕಲಿ ಜಾಹೀರಾತು ಹಾವಳಿ ತೀವ್ರವಾಗಿ ಹೆಚ್ಚುತ್ತಿದ್ದು ಇಂತಹ ಜಾಹೀರಾತುಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಪ್ರಕಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸಲುವಾಗಿ ಸಿಂಗಪುರದ ಎಚ್‌ಕ್ಯು ಮೊಬೈಲ್ ಕಂಪೆನಿ ನಕಲಿ ಜಾಹೀರಾತುಗಳನ್ನು ಪತ್ತೆ ಹಚ್ಚುವ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ಈ ಆ್ಯಪ್ ಅನ್ನು ಬಳಕೆ ಮಾಡುವ ಮೂಲಕ ಕಂಪೆನಿಗಳು, ಉದ್ಯಮಗಳು ನಕಲಿ ಜಾಹೀರಾತು ಬಿತ್ತರಿಸುವವರನ್ನು ಪತ್ತೆ ಹಚ್ಚಬಹುದು. ಈ ಆ್ಯಪ್ ಅನ್ನು ಸರಳವಾಗಿ ಎಂಎಫ್ಎಎಎಸ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಪೆನ್ನು ತಯಾರಕ ಸಣ್ಣ ಕಂಪೆನಿಯೊಂದು ಗ್ರಾಹಕರಿಗೆ ಪೆನ್ನಿನ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವೆಬ್ ಪೋರ್ಟಲ್ ಅನ್ನು ಆರಂಭಿಸಿರುತ್ತದೆ. ಈ ಅಂತರ್ಜಾಲ ತಾಣದಲ್ಲಿ ಆ ಕಂಪೆನಿಯ ಅನುಮತಿ ಇಲ್ಲದೆ ಕೆಲವು ಜಾಹೀರಾತುಗಳು ಬಿತ್ತರವಾಗುತ್ತಿರುತ್ತವೆ.

ಈ ಜಾಹೀರಾತುಗಳನ್ನು ಯಾರು ಪ್ರಕಟಿಸಿರುತ್ತಾರೆ ಎಂಬುದನ್ನು ಪತ್ತೆ ಹಚ್ಚುವುದು ಇಲ್ಲಿಯವರೆಗೂ ಕಷ್ಟಸಾಧ್ಯವಾಗಿತ್ತು. ಇದೀಗ ಈ ಆ್ಯಪ್ ಮೂಲಕ ನಕಲಿ ಜಾಹೀರಾತುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಎಚ್‌ಕ್ಯುಮೊಬೈಲ್ ಕಂಪೆನಿಯ ಮಾರುಕಟ್ಟೆ ಪ್ರವರ್ತಕರಾದ ಅಂಜು ಖನ್ನಾ ಸೊಹಮ್ ತಿಳಿಸಿದ್ದಾರೆ. http://faas.mtraction.com 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT