ಬೋಹೊ ಚಿಕ್‌ ಗೆಟಪ್‌ನಲ್ಲಿ ಐಂದ್ರಿತಾ

7

ಬೋಹೊ ಚಿಕ್‌ ಗೆಟಪ್‌ನಲ್ಲಿ ಐಂದ್ರಿತಾ

Published:
Updated:
ಬೋಹೊ ಚಿಕ್‌ ಗೆಟಪ್‌ನಲ್ಲಿ ಐಂದ್ರಿತಾ

ಬೆಂಗಳೂರು: ಸಿದ್ಧಾರ್ಥ್ ಮಹೇಶ್‌ ನಾಯಕನಾಗಿ ನಟಿಸುತ್ತಿರುವ ಧನಕುಮಾರ್‌ ನಿರ್ದೇಶನದ ‘ಗರುಡ’ ಸಿನಿಮಾದಲ್ಲಿ ದೀಪಾ ಸನ್ನಿದಿ ಜಾಗಕ್ಕೆ ಐಂದ್ರಿತಾ ರೇ ಬಂದಿದ್ದು ತಿಳಿದೇ ಇದೆ. ‘ಈ ಚಿತ್ರದಲ್ಲಿ ನಾನು ಹೊಸ ಗೆಟಪ್‌ನಲ್ಲಿ ಕಾಣಿಸಕೊಳ್ಳಲಿದ್ದೇನೆ. ಪಾತ್ರಕ್ಕೆ ಅನುಗುಣವಾಗಿ ಕಾಸ್ಟ್ಯೂಮ್‌ ಮತ್ತು ಕೇಶವಿನ್ಯಾಸವೂ ಬದಲಾಗಲಿದೆ’ ಎಂದು ಐಂದ್ರಿತಾ ಹೇಳಿಕೊಂಡಿದ್ದರು.

ಈ ದುಂಡುಗೆನ್ನೆ ಹುಡುಗಿಯ ಹೊಸ ಅವತಾರ ಹೇಗಿರುತ್ತದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಹುಟ್ಟಿತ್ತು.

ಈಗ ಗೋವಾದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಹಿಪ್ಪಿ ರೀತಿಯ ಪಾತ್ರದಲ್ಲಿ ಐಂದ್ರಿತಾ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ಒಪ್ಪುವಂತೆ ಅವರು ‘ಬೋಹೊ ಚಿಕ್‌’ ಸ್ಟೈಲ್‌ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಹೊಸ ಗೆಟಪ್‌ನ ಚಿತ್ರಗಳನ್ನು ಅವರು ‘ಪ್ರಜಾವಾಣಿ’ಗೆ ಕಳುಹಿಸಿಕೊಟ್ಟಿದ್ದಾರೆ.

ಭುಜದರ್ಧದಿಂದ ಇಳಿಬಿದ್ದಿರುವ ಬಣ್ಣಬಣ್ಣದ ಚಿತ್ತಾರಗಳುಳ್ಳ ದೊಗಲೆ ಟಾಪ್‌ ಮತ್ತು ಜೀನ್ಸ್‌ ಚೆಡ್ಡಿ ಕಾಸ್ಟ್ಯೂಮ್‌ನಲ್ಲಿ ಐಂದ್ರಿತಾ ಮಾದಕ ನೋಟ ಬೀರಿದ ಪೋಟೊ ಪಡ್ಡೆ ಹುಡುಗರ ಮನಸಲ್ಲಿ ಕಿಚ್ಚು ಹೊತ್ತಿಸುವ ಹಾಗಿದೆ. ಅದಕ್ಕೆ ತಕ್ಕ ಹಾಗೆಯೇ ಕೆಂಚುಬಣ್ಣದ ಕೇಶವಿನ್ಯಾಸವೂ ಅವರ ಹೊಸ ಗೆಟಪ್‌ನ ಭಾಗವಾಗಿದೆ.

ಸದ್ಯಕ್ಕೆ ಗೋವಾದಲ್ಲಿ ‘ಗರುಡ’ ಚಿತ್ರೀಕರಣ ನಡೆಯುತ್ತಿದೆ. ‘ಹೊಸ ಗೆಟಪ್‌ ಸಾಕಷ್ಟು ಖುಷಿ ಕೊಟ್ಟಿದೆ. ಅದರ ಜತೆಯಲ್ಲಿ ಈ ಚಿತ್ರದಲ್ಲಿ ರಂಗಾಯಣ ರಘು ಅವರ ಜತೆಗೆ ಹಲವಾರು ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಐಂದ್ರಿತಾ ಚಿತ್ರೀಕರಣದ ಸ್ಥಳದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ಬೋಹೊ ಚಿಕ್‌?:

‘ಬೋಹೊ ಚಿಕ್‌’ ಒಂದು ವಿಧದ ಗೆಟಪ್‌. ಇದು ಹಿಪ್ಪಿ ಸಂಸ್ಕೃತಿಯಿಂದ ಪ್ರಭಾವಿತವಾಗಿದೆ. ಇಳಿಬಿದ್ದ ವಿನ್ಯಾಸದ ಬಟ್ಟೆಗಳು ಮತ್ತು ವಿಶಿಷ್ಟ ಕೇಶ ವಿನ್ಯಾಸ ಇದರ ಮುಖ್ಯ ಲಕ್ಷಣಗಳು. ಈ ಗೆಟಪ್‌ ಜನಪ್ರಿಯೊಂಡಿದ್ದು 2002ರಲ್ಲಿ.

ಆಸ್ಟ್ರೇಲಿಯಾದ ಪತ್ರಕರ್ತೆ ಲೌರಾ ಡೇಮಾಸಿ ಅವರ ಲೇಖನದ ಮೂಲಕ ಈ ಗೆಟಪ್‌ ಹೆಚ್ಚು ಜನಪ್ರಿಯವಾಯ್ತು. 2005ರಲ್ಲಿ ಅಮೆರಿಕನ್‌ ನಟಿ ಸಿಯೆನ್ನಾ ಮಿಲ್ಲರ್‌ ಮತ್ತು ಇಂಗ್ಲೆಂಡ್‌ ರೂಪದರ್ಶಿ  ಕೇಟ್‌ ಮೋಸ್‌ ಇವರು ‘ಬೋಹೊ ಚಿಕ್‌’ ಅನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿದರು. ಹೀಗಾಗಿ ಈ ಶೈಲಿ ಆಸ್ಟ್ರೇಲಿಯಾ, ಅಮೆರಿಕ ಮತ್ತು ಇಂಗ್ಲೆಂಡ್‌ ಮೂರು ದೇಶಗಳಲ್ಲಿ ಚಿಗಿತುಕೊಂಡು ಈಗ ಜಗತ್ತಿನಾದ್ಯಂತ ಪಸರಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry