ಲಂಡನ್‌ನ ವಸತಿ ಸಮುಚ್ಛಯದಲ್ಲಿ ಬೆಂಕಿ ದುರಂತಕ್ಕೆ ಕನಿಷ್ಠ 12 ಜನ ಸಾವು

7
ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ

ಲಂಡನ್‌ನ ವಸತಿ ಸಮುಚ್ಛಯದಲ್ಲಿ ಬೆಂಕಿ ದುರಂತಕ್ಕೆ ಕನಿಷ್ಠ 12 ಜನ ಸಾವು

Published:
Updated:
ಲಂಡನ್‌ನ ವಸತಿ ಸಮುಚ್ಛಯದಲ್ಲಿ ಬೆಂಕಿ ದುರಂತಕ್ಕೆ ಕನಿಷ್ಠ 12 ಜನ ಸಾವು

ಲಂಡನ್: ಪಶ್ಚಿಮ ಲಂಡನ್‌ನ ‘ವೆಸ್ಟ್‌ ಎಸ್ಟೇಟ್‌’ನ 24 ಮಹಡಿಯ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 12 ಜನ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಬುಧವಾರ ಬೆಳಿಗ್ಗೆ ಭಾರತೀಯ ಕಾಲಮಾನ 5.45ಕ್ಕೆ ವಸತಿ ಸಮುಸಚ್ಛಯದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಸುಮಾರು 120 ಫ್ಲ್ಯಾಟ್‌ಗಳಿರುವ ಈ ವಸತಿ ಸಮುಚ್ಛಯದಲ್ಲಿ 600ಕ್ಕೂ ಹೆಚ್ಚು ಜನ ಸಿಲುಕಿರುವ ಅನುಮಾನವಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

‘ಇದುವರೆಗೆ 12 ಜನ ಮೃತಪಟ್ಟಿರುವುದು ತಿಳಿದುಬಂದಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮೃತರ ಗುರುತುಪತ್ತೆ ಮಾಡಲು ಸಮಯ ಬೇಕಾಗಬಹುದು. ದುರಂತಕ್ಕೆ ಕಾರಣವೇನೆಂದು ಈಗಲೇ ಹೇಳಲಾಗದು’ ಎಂದು ಮೆಟ್ರೊಪಾಲಿಟನ್ ಪೊಲೀಸ್‌ ಕಮಾಂಡರ್ ಸ್ಟುವರ್ಟ್ ಕಂಡಿ ತಿಳಿಸಿದ್ದಾರೆ.

ಕುಸಿದು ಬೀಳುವ ಭೀತಿ: ಬೆಂಕಿ ನಂದಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಕಟ್ಟಡ ಕುಸಿದುಬೀಳುವ ಭೀತಿ ಎದುರಾಗಿದೆ. ಅಗ್ನಿಶಾಮಕ ದಳದ ಸುಮಾರು 250 ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಇದುವರೆಗೆ ಹತ್ತಾರು ಸಂಖ್ಯೆಯ ಜನರನ್ನು ರಕ್ಷಿಸಲಾಗಿದೆ ಎಂದು ಲಂಡನ್‌ನ ಮೇಯರ್ ಸಾದಿಕ್ ಖಾನ್ ತಿಳಿಸಿದ್ದಾರೆ.

[Related]

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry