ಹೀರೊದಿಂದ ಎರಡು ಬೈಕ್‌ಗಳು

7

ಹೀರೊದಿಂದ ಎರಡು ಬೈಕ್‌ಗಳು

Published:
Updated:
ಹೀರೊದಿಂದ ಎರಡು ಬೈಕ್‌ಗಳು

ಹೀರೊದಿಂದ ಎರಡು ಬೈಕ್‌ಗಳು

ಹೀರೊ ಮೋಟೊಕಾರ್ಪ್‌ ಇದೇ ಸೆಪ್ಟೆಂಬರ್‌ನಲ್ಲಿ ಎರಡು ಹೊಸ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಹಬ್ಬದ ಸಂದರ್ಭವನ್ನು ನೋಡಿಕೊಂಡು ಈ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯಂತೆ.

ಈ ಹಿಂದೆ ಆರು ಹೊಸ ಮಾದರಿಗಳನ್ನು ಈ ವರ್ಷ ಬಿಡುಗಡೆಗೊಳಿಸುವುದಾಗಿ ಹೀರೊ ಮೋಟೊಕಾರ್ಪ್‌ನ ಸಿಇಒ ಪವನ್ ಮಂಜೋಲ್ ತಿಳಿಸಿದ್ದರು. ಆದರೆ ಕೆಲವು ಬೈಕ್‌ಗಳನ್ನು ಸದ್ಯಕ್ಕೆ ಪಟ್ಟಿಯಿಂದ ಹೊರಗಿಟ್ಟಿದ್ದು, ಎರಡು ಬೈಕ್‌ಗಳನ್ನು ರಸ್ತೆಗಿಳಿಸುವುದಾಗಿ ತಿಳಿಸಿದ್ದಾರೆ. ಹೀರೊದ ಎರಡು ಬೈಕ್‌ಗಳು ಈ ವರ್ಷ ಬಿಡುಗಡೆಗೊಳ್ಳುವ ಹಾದಿಯಲ್ಲಿವೆ.

**

ಸ್ಕೋಡಾ ಒಕ್ಟಾವಿಯಾ ಬಿಡುಗಡೆ

ಫೇಸ್‌ಲಿಫ್ಟ್‌ಗೊಂಡ ಹೊಸ ಸ್ಕೋಡಾ ಒಕ್ಟಾವಿಯಾ ಕಾರಿನ ಬಿಡುಗಡೆ ದಿನಾಂಕ ನಿಗದಿಗೊಂಡಿದೆ. ಮೇಲ್ದರ್ಜೆಗೇರಿಸಿದ ವಿನ್ಯಾಸದೊಂದಿಗೆ  ಒಕ್ಟಾವಿಯಾ ಸಜ್ಜಾಗಿದ್ದು, ಜುಲೈ ಮೊದಲ ವಾರದಲ್ಲಿ ಬಿಡುಗಡೆಗೊಳ್ಳುವ ಸೂಚನೆ ನೀಡಿದೆ. ₹51,000ರ ಟೋಕನ್ ಬೆಲೆಯೊಂದಿಗೆ ಬುಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ.

ಆಂಬಿಷನ್, ಸ್ಟೈಲ್ ಹಾಗೂ ಸ್ಟೈಲ್ ಪ್ಲಸ್‌ ಎಂಬ ಮೂರು ಮಾದರಿಗಳಲ್ಲಿ ಲಭ್ಯ. ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಕ್ವಾಡ್‌ ಲ್ಯಾಂಪ್‌, 17 ಇಂಚಿನ ಅಲಾಯ್ ವೀಲ್,  ರಿವೈಸ್ಡ್ ಬಂಪರ್, ಟೇಲ್‌ ಲ್ಯಾಂಪ್‌ಕ್ಲಸ್ಟರ್‌ ಹಾಗೂ ಮರುವಿನ್ಯಾಸಗೊಂಡ ರಿಯರ್ ಬಂಪರ್ ಇರಲಿದೆ. ಒಳಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೇನ್ಮೆಂಟ್‌ ಸಿಸ್ಟಂ ಇದೆ. ಚಾಲಕನ ಸುಸ್ತು ಪತ್ತೆ ವ್ಯವಸ್ಥೆ, ರಿಯರ್‌ವ್ಯೂ ಕ್ಯಾಮೆರಾ, ಸುರಕ್ಷತೆಗೆ 6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. 1.4 ಲೀಟರ್ ಹಾಗೂ 1.8 ಲೀಟರ್‌ ಪೆಟ್ರೋಲ್ ಎಂಜಿನ್ 147ಎಚ್‌ಪಿ ಶಕ್ತಿ ಉತ್ಪಾದಿಸಲಿದೆ. 2.0 ಲೀಟರ್‌ ಡೀಸೆಲ್‌ ಎಂಜಿನ್ 140 ಎಚ್‌ಪಿ ಶಕ್ತಿ ಉತ್ಪಾದಿಸಲಿದೆ. 6 ಹಾಗೂ 7 ಸ್ಪೀಡ್‌ ಮ್ಯಾನ್ಯುಯಲ್ ಎಂಜಿನ್, ಸ್ಪೀಡ್ ಡಿಎಸ್‌ಜಿ ಆಟೊಮೆಟಿಕ್‌ ಗಿಯರ್‌ ಬಾಕ್ಸ್ ಇರಲಿದೆ.   ಬೆಲೆ ಕುರಿತು ಇನ್ನೂ ಮಾಹಿತಿ ಲಭ್ಯವಿಲ್ಲ.

**

ಮೈಕೆಲಿನ್‌ ನಿಂದ ಎಸ್‌ಯುವಿ ಟೈರ್‌

ಫ್ರೆಂಚ್‌ನ ಟೈರ್‌ ತಯಾರಕ ಕಂಪೆನಿ ಮೈಕೆಲಿನ್, ತನ್ನ ಫೋರ್ಸ್‌ ಶ್ರೇಣಿಯ ಟೈರ್‌ಗಳನ್ನು ಭಾರತದಲ್ಲಿ ಲಭ್ಯವಾಗುವ ಅವಕಾಶ ಕಲ್ಪಿಸುವುದಾಗಿ ಘೋಷಿಸಿದೆ.

ಮೈಕೆಲಿನ್ ಎಲ್‌ಟಿಎಕ್ಸ್ ಫೋರ್ಸ್ ಟೈರ್‌ಗಳ ಮಾರಾಟ, ಭಾರತದಲ್ಲಿ ಕಂಪೆನಿಯ ಮಾರುಕಟ್ಟೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದೆ. ಭಾರತದಲ್ಲಿ ಸದ್ಯಕ್ಕೆ ಎಸ್‌ಯುವಿಗಳ ಮಾರುಕಟ್ಟೆ ಮುಂಚೂಣಿಯಲ್ಲಿದೆ. ಪ್ರತಿ ನಾಲ್ಕರಲ್ಲಿ ಒಬ್ಬರು ಎಸ್‌ಯುವಿ ಖರೀದಿ ಮಾಡುತ್ತಿರುವುದು ಈ ಟೈರ್‌ಗಳ ತಯಾರಿಕೆಗೂ ಬೇಡಿಕೆ ಹಿಗ್ಗಿಸಿದೆ. ಇದೇ ಕಾರಣಕ್ಕೆ ಮೈಕೆಲಿನ್ ಟೈರ್‌ಗಳ ಮಾರುಕಟ್ಟೆ  ವಿಸ್ತರಿಸಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry