ಯುದ್ಧ ಪ್ರಚೋದಿಸುವವರನ್ನೇ ಗಡಿಗೆ ಕಳುಹಿಸಿ: ಸಲ್ಮಾನ್

7

ಯುದ್ಧ ಪ್ರಚೋದಿಸುವವರನ್ನೇ ಗಡಿಗೆ ಕಳುಹಿಸಿ: ಸಲ್ಮಾನ್

Published:
Updated:
ಯುದ್ಧ ಪ್ರಚೋದಿಸುವವರನ್ನೇ ಗಡಿಗೆ ಕಳುಹಿಸಿ: ಸಲ್ಮಾನ್

ಮುಂಬೈ: ಯಾವುದೇ ಬಿಕ್ಕಟ್ಟಿಗೆ ಯುದ್ಧವೊಂದೇ ಪರಿಹಾರವಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.ತಮ್ಮ ‘ಟ್ಯೂಬ್‌ಲೈಟ್‌’ ಚಿತ್ರದಲ್ಲಿ ಯುದ್ಧವನ್ನು ಶಾಂತಿ ಮಾತುಕತೆ ಪ್ರತಿಪಾದನೆಗೆ ಒಂದು ಹಿನ್ನೆಲೆಯನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

‘ಯುದ್ಧವು ಇಲ್ಲೊಂದು ವೇದಿಕೆಯಷ್ಟೇ. ಎಲ್ಲಿಯೇ ಯುದ್ಧ ನಡೆದರೂ ಎರಡೂ ಕಡೆಯ ಸೈನಿಕರು ಸಾವಿಗೀಡಾಗುತ್ತಾರೆ. ಕುಟುಂಬಗಳು ತಮ್ಮ ಪ್ರೀತಪಾತ್ರರಾದ ಮಕ್ಕಳು ಮತ್ತು ತಂದೆಯನ್ನು ಕಳೆದುಕೊಳ್ಳುತ್ತವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.‘ಯುದ್ಧಕ್ಕೆ ಯಾರು ಆದೇಶ ಕೊಡುತ್ತಾರೋ ಅವರನ್ನು ರಣರಂಗದಲ್ಲಿ ಮುಂದೆ ನಿಲ್ಲಿಸಿ, ಅವರ ಕೈಗೆ ಗನ್ ನೀಡಿ, ಯುದ್ಧ ಮಾಡುವಂತೆ ಹೇಳಬೇಕು. ಆಗ ಯುದ್ಧ ಒಂದೇ ದಿನದಲ್ಲಿ ಮುಗಿದು ಹೋಗುತ್ತದೆ. ಅವರ ಕೈ, ಕಾಲುಗಳಲ್ಲಿ ನಡುಕ ಹುಟ್ಟುತ್ತದೆ. ಅವರು ಅಲ್ಲಿಂದ ಓಡಿಬಂದು ಪುನಃ ಚರ್ಚೆಯಲ್ಲಿ ತೊಡಗುತ್ತಾರೆ’ ಎಂದು ಸಲ್ಮಾನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry