ಭೀಕರ ಬರಗಾಲ: ನಿದ್ದೆಯಲ್ಲಿ ರಾಜ್ಯ ಸರ್ಕಾರ

7
ಅಭಿನಂದನಾ ಸಮಾರಂಭದಲ್ಲಿ ಮಧ್ಯಪ್ರದೇಶದ ಶಿಕ್ಷಣ ಸಚಿವೆ ಅರ್ಚನಾ ಚಟ್ನಿಸ್ ಆರೋಪ

ಭೀಕರ ಬರಗಾಲ: ನಿದ್ದೆಯಲ್ಲಿ ರಾಜ್ಯ ಸರ್ಕಾರ

Published:
Updated:
ಭೀಕರ ಬರಗಾಲ: ನಿದ್ದೆಯಲ್ಲಿ ರಾಜ್ಯ ಸರ್ಕಾರ

ಹಿರಿಯೂರು: ‘ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು, ಬರ ಪರಿಹಾರ ಕಾಮ ಗಾರಿ ನಡೆಸುವ ಬದಲು ಇಲ್ಲಿನ ಮುಖ್ಯ ಮಂತ್ರಿ ಗಾಢನಿದ್ದೆಯಲ್ಲಿ ಮುಳುಗಿರು ವುದು ಈ ರಾಜ್ಯದ ಜನತೆಯ ದುರ ದೃಷ್ಟ’ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವೆ ಅರ್ಚನಾ ಚಟ್ನಿಸ್ ಹೇಳಿದರು.ತಾಲ್ಲೂಕಿನ ಗನ್ನಾಯಕನಹಳ್ಳಿಯಲ್ಲಿ ಬುಧವಾರ  ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಯಡಿಯಲ್ಲಿ ಅಡುಗೆ ಅನಿಲ ಸಂಪರ್ಕ ಪಡೆದ ಮಹಿಳಾ ಫಲಾ ನುಭವಿಗಳಿಗೆ ಬಿಜೆಪಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ದಿನಕ್ಕೆ 20 ಗಂಟೆ ದುಡಿಯುತ್ತಿರುವ ನರೇಂದ್ರಮೋದಿ ಅವರು ವಿಶ್ವದಲ್ಲಿಯೇ ಮಾದರಿ ಪ್ರಧಾನಿ ಎನಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮೋದಿ ಯವರ ಉಜ್ವಲ, ಫಸಲ್ ಬಿಮಾ, ಬೇಟಿ ಪಡಾವೋ ಬೇಟಿ ಬಚಾವೋ, ಜನ್‌ಧನ್, ಜೀವನ್ ಸುರಕ್ಷಾ ಮೊದಲಾದ ಯೋಜನೆಗಳು ಜಾರಿಯಾಗ ಬೇಕೆಂದರೆ ಕಾಂಗ್ರೆಸ್ ಮುಕ್ತಗೊಳಿಸಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಬೇಕು.

ರೈತರ ಸಾಲ ಮನ್ನಾ ಮಾಡಲು ಕೇಂದ್ರದ ಕಡೆಗೆ ಬೆರಳು ತೋರಿಸುವ ಸಿಎಂಗೆ ನಾಚಿಕೆ ಯಾಗಬೇಕು. ಅವರೊಮ್ಮೆ ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಗಿ ತರಬೇತಿ ಪಡೆಯಲಿ ಎಂದು ಅವರು ಸಲಹೆ ನೀಡಿದರು.ನಾಲ್ಕು ವರ್ಷ ನಿದ್ದೆಯಲ್ಲಿ ಮುಳುಗಿದ್ದ ರಾಜ್ಯ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿವೃದ್ಧಿಯ ನಾಟಕ ಮಾಡುತ್ತಿದೆ. ನಾಲ್ಕು ವರ್ಷ ಮಾಡದೇ ಇದ್ದುದನ್ನು ಉಳಿದ ಏಳೆಂಟು ತಿಂಗಳಲ್ಲಿ ಮಾಡಲು ಸಾಧ್ಯವೇ ಎಂದು ಅರ್ಚನಾ ಪ್ರಶ್ನಿಸಿದರು.ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ‘ಕೇಂದ್ರದ ಉಜ್ವಲ ಯೋಜನೆಗೆ ರಾಜ್ಯ ಸರ್ಕಾರ ಅನಿಲ ಭಾಗ್ಯ ಎಂದು ಹೆಸರಿಟ್ಟು, ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಈ ಸರ್ಕಾರ ದೊಡ್ಡ ಸಾಧನೆ ಮಾಡಿರುವುದು ಪ್ರತಿದಿನ ನೀಡುತ್ತಿರುವ ಜಾಹೀರಾತಿನಲ್ಲಿ ಮಾತ್ರ’ ಎಂದು ಟೀಕಿಸಿದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ  ಕೆ.ಎಸ್. ನವೀನ್ ಮಾತನಾಡಿದರು. ಪಕ್ಷದ ಹಿಂದುಳಿದ ವಿಭಾಗದ ರಾಜ್ಯ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ಎಂ. ಜಯಣ್ಣ, ಸುರೇಶ್, ಆರ್. ರಾಮಯ್ಯ, ಟಿ. ಚಂದ್ರಶೇಖರ್, ಮುರಳಿ,ರತ್ನಮ್ಮ, ರಾಮದಾಸ್, ಪೂರ್ಣಿಮಾ ಪ್ರತಾಪ್, ಕೆ. ದ್ಯಾಮಣ್ಣ, ಜಿ.ಪಿ. ಯಶವಂತರಾಜು, ಕೇಶವಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry