‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

7

‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

Published:
Updated:
‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

​ವಿದ್ಯಾರ್ಥಿನಿಧಿಗೆ ಅರ್ಜಿ ಸಲ್ಲಿಸಿ ಪಡೆದ ಹಣದಿಂದ ಕಾಲೇಜು ಶುಲ್ಕ ತುಂಬಲು ಅನುಕೂಲವಾಯಿತು. ‘ಪ್ರಜಾವಾಣಿ’ಗೆ ಧನ್ಯವಾದಗಳು. ನಾನು ಅಧಿಕಾರಿಯಾದ ಮೇಲೆ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂಬ ಪ್ರೇರಣೆಯೂ ಒದಗಿದೆ.

ಕೆ.ವಿ.ರಂಜಿತಾ, ಹಲವಾಗಲು, ಚಿತ್ರದುರ್ಗ

***

‘ಪ್ರಜಾವಾಣಿ’ ವಿದ್ಯಾರ್ಥಿನಿಧಿಯಿಂದ ನೀಡಿದ ಸ್ಕಾಲರ್‌ಶಿಪ್‌  ಅಗತ್ಯ ಸಂದರ್ಭದಲ್ಲಿ ನೆರವಿಗೆ ಬಂತು. ಈ ಹಣದಿಂದ ಹಾಸ್ಟೆಲ್‌ ಶುಲ್ಕ ತುಂಬಿದೆ.             ಉಳಿದ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿದೆ.

ನಿರಂಜನ ಬಿ.ಎಸ್‌, ಜೀನಹಳ್ಳಿ, ಹೊನ್ನಾಳಿ ತಾಲ್ಲೂಕು

***

‘ಪ್ರಜಾವಾಣಿ’ ವಿದ್ಯಾರ್ಥಿನಿಧಿಯಿಂದ ಪಡೆದ ಸ್ಕಾಲರ್‌ಶಿಪ್‌ ಹಣವನ್ನು ಕಲಿಕೆಗೆ ಸಂಬಂಧಿಸಿದ ಪುಸ್ತಕಗಳ ಖರೀದಿಗೆ ಬಳಸಿದೆ. ಪ್ರಥಮ ಪಿಯುನಲ್ಲಿ ಶೇ 95 ಅಂಕ ಬಂದಿದೆ.

ಸ್ಪೂರ್ತಿ ಬಿ, ಹಿರಿಯೂರು

***

ಪತ್ರಿಕೆ ನೀಡಿದ ಸ್ಕಾಲರ್‌ಶಿಪ್‌ ಹಣದಿಂದ ಉತ್ತಮ ಕಾಲೇಜಿಗೆ ಸೇರಲು ಅನುಕೂಲವಾಯಿತು. ಪಿಯು ಪರೀಕ್ಷೆಯಲ್ಲಿ ಶೇ 80 ಅಂಕ ಗಳಿಸಿದ್ದೇನೆ.

ಸೃಷ್ಟಿ ಎಂ.ಬಿ, ಭಗತ್‌ಸಿಂಗ್‌ ನಗರ, ದಾವಣಗೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry