ಲೀ ಚಾಂಗ್‌ಗೆ ಆಘಾತ ನೀಡಿದ ಪ್ರಣಯ್‌

7
ಇಂಡೋನೇಷ್ಯಾ ಸೂಪರ್ ಸೀರೀಸ್‌ ಬ್ಯಾಡ್ಮಿಂಟನ್‌: ಜಾರ್ಜನ್‌ಸೇನ್‌ಗೆ ಸೋಲುಣಿಸಿದ ಶ್ರೀಕಾಂತ್‌

ಲೀ ಚಾಂಗ್‌ಗೆ ಆಘಾತ ನೀಡಿದ ಪ್ರಣಯ್‌

Published:
Updated:
ಲೀ ಚಾಂಗ್‌ಗೆ ಆಘಾತ ನೀಡಿದ ಪ್ರಣಯ್‌

ಜಕಾರ್ತ : ವಿಶ್ವ ಅಗ್ರ ಕ್ರಮಾಂಕದ ಆಟಗಾರ, ಮಲೇಷ್ಯಾದ ಲೀ ಚಾಂಗ್ ವೀ ಅವರಿಗೆ ಭಾರತದ ಎಚ್‌.ಎಸ್. ಪ್ರಣಯ್‌ ಇಂಡೋನೇಷ್ಯಾ ಸೂಪರ್ ಸೀರೀಸ್‌ನಲ್ಲಿ ಆಘಾತ ನೀಡಿದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಅವರು 21–10, 21–18ರಲ್ಲಿ ಜಯ ಸಾಧಿಸಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಪ್ರವೇಶಿಸಿ ದರು. 40 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 25ನೇ ನಂಬರ್ ಆಟಗಾರ ಪ್ರಣಯ್‌ ಆರಂಭದಲ್ಲೇ ಆಧಿ ಪತ್ಯ ಸ್ಥಾಪಿಸಿದರು. ಮೊದಲ ಸೆಟ್‌ನಲ್ಲಿ ನಿರಾಯಾಸ ಜಯ ಸಾಧಿಸಿದ ಅವರಿಗೆ ಎರಡನೇ ಸೆಟ್‌ನಲ್ಲಿ ಲೀ ಚಾಂಗ್‌ ಸ್ವಲ್ಪ ಪ್ರತಿರೋಧ ಒಡ್ಡಿದರು.

ಮೊದಲ ಸೆಟ್‌ನ ಒಂದು ಹಂತದಲ್ಲಿ ಏಕಪಕ್ಷೀಯವಾದ ಆರು ಗೇಮ್‌ಗಳ ಮುನ್ನಡೆ ಸಾಧಿಸಿದ ಪ್ರಣಯ್‌ ನಂತರ ಈ ಮುನ್ನಡೆಯನ್ನು 10–3ಕ್ಕೆ ಏರಿಸಿ ದರು. ಇದರಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡು ಸೆಟ್‌ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ 10–6ರ ಮುನ್ನಡೆ ಗಳಿಸಿದರು. ಆದರೆ ಎಚ್ಚೆತ್ತು ಕೊಂಡ ಲೀ ನಿರಂತರ ಪಾಯಿಂಟ್‌ ಗಳನ್ನು ಗಳಿಸಿದರು. ಹೀಗಾಗಿ ಪ್ರಣಯ್‌ 12–13ರ ಹಿನ್ನಡೆ ಅನುಭವಿಸಬೇಕಾ ಯಿತು. ಆದರೆ ಅಷ್ಟಕ್ಕೆ ಭಾರತದ ಆಟ ಗಾರ ಧೃತಿಗೆಡಲಿಲ್ಲ. 17–14ರ ಮುನ್ನಡೆ ಸಾಧಿಸಿ ಜಯದತ್ತ ದಾಪುಗಾಲು ಹಾಕಿ ದರು. ಈ ಮೂಲಕ ಅಗ್ರ ಶ್ರೇಯಾಂಕದ ಆಟಗಾರನಿಗೆ ನಿರಾಸೆ ಉಂಟು ಮಾಡಿದರು. ಮುಂದಿನ ಪಂದ್ಯದಲ್ಲಿ ಪ್ರಣಯ್‌, ಚೀನಾದ ಚೆನ್‌ ಲಾಂಗ್‌ ವಿರುದ್ಧ ಸೆಣಸಲಿದ್ದಾರೆ.

ಕಿದಂಬಿ ಶ್ರೀಕಾಂತ್‌ಗೆ ಜಯ: ಕಿದಂಬಿ ಶ್ರೀಕಾಂತ್‌ ನಾಲ್ಕನೇ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರ ಜಾನ್‌ ಜಾರ್ಜೆನ್ಸೆನ್‌ ವಿರುದ್ಧ 21–15, 20–22 ಹಾಗೂ 21–16ರಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ ಹಂತಕ್ಕೆ ಪ್ರವೇಶಿಸಿದರು. ವಿಶ್ವದ 22ನೇ ನಂಬರ್ ಆಟಗಾರ ಶ್ರೀಕಾಂತ್‌ ಅವರ ಗೆಲುವು ಕಠಿಣವಾಗಿತ್ತು. ಆದರೂ ಒಂಬತ್ತನೇ ನಂಬರ್ ಆಟಗಾರನನ್ನು ಮಣಿಸಿ ಸಂಭ್ರಮಿಸಿದರು. ಆರಂಭದ ಗೇಮ್‌ನಲ್ಲಿ ರೋಚಕ ಹೋರಾಟ ಕಂಡುಬಂತು.

10–10ರ ಸಮಬಲ ಸಾಧಿಸಿದ ಸಂದರ್ಭದಲ್ಲಿ ತಂತ್ರಗಳನ್ನು ಬದಲಿಸಿದ ಶ್ರೀಕಾಂತ್‌ ಎದುರಾಳಿಗೆ ಐದು ಪಾಯಿಂಟ್ ಮಾತ್ರ ಬಿಟ್ಟುಕೊಟ್ಟು ಏಳು ಪಾಯಿಂಟ್ ತಮ್ಮದಾಗಿಸಿ ಕೊಂಡರು. ಆದರೂ ಜಾರ್ಜನ್ಸೆನ್‌ ಹೋರಾಟ ಮುಂದುವರಿಸಿ 20–20ರಲ್ಲಿ ಸಮಬಲ ಸಾಧಿಸಿದರು. ನಂತರ ಸೆಟ್‌ ಗೆದ್ದು ನಿರ್ಣಾಯಕ ಪಂದ್ಯವನ್ನು ಕುತೂಹಲಕಾರಿ ಘಟ್ಟಕ್ಕೆ ತಲುಪಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಶ್ರೀಕಾಂತ್‌ಗೆ ಸುಲಭ ಜಯ ಒಲಿಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry