ನಾನು ಎನ್‍ಡಿಎ ಅಭ್ಯರ್ಥಿಯಲ್ಲ: 'ಮೆಟ್ರೊ ಮ್ಯಾನ್' ಇ. ಶ್ರೀಧರನ್

7

ನಾನು ಎನ್‍ಡಿಎ ಅಭ್ಯರ್ಥಿಯಲ್ಲ: 'ಮೆಟ್ರೊ ಮ್ಯಾನ್' ಇ. ಶ್ರೀಧರನ್

Published:
Updated:
ನಾನು ಎನ್‍ಡಿಎ ಅಭ್ಯರ್ಥಿಯಲ್ಲ: 'ಮೆಟ್ರೊ ಮ್ಯಾನ್' ಇ. ಶ್ರೀಧರನ್

ಕೊಚ್ಚಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ದೆಹಲಿ ಮೆಟ್ರೊ ಮಾಜಿ ಮುಖ್ಯಸ್ಥ ಇ. ಶ್ರೀಧರನ್ ಸ್ಪರ್ಧಿಸುತ್ತಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಆದರೆ ತಾನು ಎನ್‍ಡಿಎ ಅಭ್ಯರ್ಥಿ ಅಲ್ಲ. ಆ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಶ್ರೀಧರನ್ ಹೇಳಿದ್ದಾರೆ.

ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಸಂಬಂಧ ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ನಡುವೆ ಶುಕ್ರವಾರ ಮೊದಲ ಸಭೆ ನಡೆದಿದ್ದು, ಎರಡೂ ಕಡೆಯಿಂದ ಯಾವುದೇ ಹೆಸರನ್ನು ಪ್ರಸ್ತಾಪಿಸದೆ ಸಭೆ ಅನಿಶ್ಚಿತವಾಗಿ ಮುಕ್ತಾಯವಾಗಿದೆ.

ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್‌ನ ಮುಖಂಡ ಗುಲಾಮ್‌ ನಬಿ ಆಜಾದ್‌ ಅವರು, ‘ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡರು ಯಾರದೇ ಹೆಸರನ್ನು ಪ್ರಸ್ತಾಪಿಸಿಲ್ಲ. ಬದಲಿಗೆ, ಅಭ್ಯರ್ಥಿಯ ಹೆಸರನ್ನು ಸೂಚಿಸುವಂತೆ ನಮಗೆ ಕೇಳಿದ್ದಾರೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry