ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಪ್ರಾಣಿಗಳ ಹಾವಳಿ: ಕಂಗೆಟ್ಟ ಕೃಷಿಕರು

Last Updated 18 ಜೂನ್ 2017, 8:49 IST
ಅಕ್ಷರ ಗಾತ್ರ

ಕೊಕ್ಕರ್ಣೆ(ಬ್ರಹ್ಮಾವರ) : ಕೊಕ್ಕರ್ಣೆ ಸಮೀಪದ ನಾಲ್ಕೂರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕಜ್ಕೆ, ಮಾರಾಳಿ, ಚಂದಾಳಕಟ್ಟೆ, ನ್ಯಾಗಳಬೆಟ್ಟು, ಕೊಡ್ಗಿ, ನಡ್ಕೇರಿ ಮುಂತಾದ ಭಾಗಗಳ ಜನರಿಗೆ ಕೃಷಿಯೇ ಜೀವನವಾಗಿದ್ದು, ಈ ಭಾಗ ದಲ್ಲಿ ಕಾಡು ಪ್ರಾಣಿಗಳ ಸಮಸ್ಯೆಯಿಂದ ರೈತರು ಕಂಗೆಟ್ಟಿದ್ದಾರೆ.

ಕೃಷಿ ಆದಾಯವನ್ನೇ ಆಶ್ರಯಿಸಿರುವ ಇಲ್ಲಿನ ರೈತರು ಕೃಷಿಯ ಬಗ್ಗೆ ನಿರಾಸಕ್ತಿ ಹೊಂದುವ ಸ್ಥಿತಿಯಲ್ಲಿದ್ದಾರೆ, ಮಾತ್ರವ ಲ್ಲದೇ ಹಗಲು ರಾತ್ರಿ ತಿರುಗಾಡುವುದೇ ಭಯವೆನಿಸಿದೆ. ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.

‘ಕೃಷಿ ಕಾರ್ಯ ಆರಂಭವಾದ ದಿನದಿಂದ ಫಸಲು ದೊರೆಯುವ ತನಕ ರೈತರು ಹಲವು ಸಂಕಷ್ಟಗಳನ್ನು ಅನು ಭವಿ ಸುತ್ತಾರೆ. ಇದರಲ್ಲಿ ಮುಖ್ಯವಾಗಿ  ಕಾಡುಪ್ರಾಣಿಗಳ ಹಾವಳಿ’ ಎನ್ನುತ್ತಾರೆ ಸ್ಥಳೀಯ ನೊಂದ ರೈತರು.

ಕಾಡುಗಳ ನಾಶದಿಂದ ಇಂದು ಕಾಡುಪ್ರಾಣಿಗಳು ನಾಡಿಗೆ ಬಂದು ರೈತರಿಗೆ ತೊಂದರೆ ನೀಡುತ್ತಿವೆ. ಇವುಗಳಲ್ಲಿ ಪ್ರಮುಖವಾಗಿ ಕಾಡುಕೋಣಗಳು ಮತ್ತು ಮಂಗಗಳು. ಗದ್ದೆ, ತೋಟಗಳಿಗೆ ಹಿಂಡು ಹಿಂಡಾಗಿ  ಫಸಲಿನ ಗದ್ದೆಗಳಿಗೆ ದಾಳಿ ಮಾಡಿ ಬೆಳೆಗಳನ್ನು ತಿನ್ನುವುದರ ಜತೆಗೆ ಅವುಗಳನ್ನು ಹಾಳುಗೆಡಹುತ್ತಿವೆ.

ಕೃಷಿಕರು ತಮ್ಮ ಹೊಲದಲ್ಲಿ  ವನ್ಯ ಪ್ರಾಣಿಗಳಿಂದ ಆಗಿರುವ ಬೆಳೆ ನಷ್ಟಕ್ಕೆ ಅಧಿಕಾರಿಗಳ ಮೊರೆ ಹೋದರೆ ಅವರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ . ಅನಗತ್ಯ ದಾಖಲೆ ಪತ್ರ ಕೇಳಿ ಸತಾಯಿಸುತ್ತಾರೆ. ಆ ಬಳಿಕ ಪರಿಹಾರ ಸಿಕ್ಕರೂ ಪ್ರಾಣಿಗಳಿಂದ ಸಂಭವಿಸಿದ ನಷ್ಟಕ್ಕೆ ಸರಿಹೊಂದಲಾರದು’ ಎನ್ನುತ್ತಾರೆ ನೊಂದ ಕೃಷಿಕರು.

‘ರೈತರು ಕೃಷಿಯ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಇದೇ ವೇಳೆ ಸರ್ಕಾರ ಕಾಡು ಮೃಗಗಳಿಂದ ಸಂಭವಿಸುವ ಕೃಷಿ ನಾಶಕ್ಕೆ ರೈತರಿಗೆ ಸಮರ್ಪಕ ಪರಿಹಾರದ ಮೊತ್ತವನ್ನು ನೀಡುವ ಬಗ್ಗೆ ನೀತಿ ಸಂಹಿತೆ ರೂಪಿಸಬೇಕು’ ಎನ್ನುವುದು ರೈತರ ಒತ್ತಾಯವಾಗಿದೆ.

* * 

ವನ್ಯ ಮೃಗಗಳಿಂದ ಬೆಳೆ ನಾಶದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡಿದರೆ ಸಿಗುವ ಮೊತ್ತ ಅತಿ ಕಡಿಮೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಕ್ರಮ ಜರುಗಿಸಬೇಕು.
ನೊಂದ ಕೃಷಿಕರು,
ಕೊಕ್ಕರ್ಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT