ಹೆಸರಿಗೆ ಪೈಸಾ ವಸೂಲ್‌!

7

ಹೆಸರಿಗೆ ಪೈಸಾ ವಸೂಲ್‌!

Published:
Updated:
ಹೆಸರಿಗೆ ಪೈಸಾ ವಸೂಲ್‌!

‘ಜಬ್‌ ಹ್ಯಾರಿ ಮೆಟ್‌ ಸೇಜಲ್‌’ ಚಿತ್ರದ ಶೀರ್ಷಿಕೆಗಾಗಿ ರಣಬೀರ್‌ ಕಪೂರ್‌ ಐದು ಸಾವಿರ ರೂಪಾಯಿ ಕೇಳಿದ್ದಾರೆ. ‘ನನಗೆ ಯಾಕೆ ಕೊಡಬೇಕು’ ಎಂದು  ‘ಬಾಲಿವುಡ್‌ ಬಾದ್‌ಶಾ’ ಶಾರುಖ್‌ ಖಾನ್‌ ಕೇಳಿದ್ದಾರೆ.

ಕೋಟಿಗಟ್ಟಲೆ ಸಂಪಾದಿಸುವ ಈ ನಟರು ಕೇವಲ ಐದು ಸಾವಿರಕ್ಕಾಗಿ ಕಿತ್ತಾಡುತ್ತಿದ್ದಾರೆ ಅಂದುಕೊಂಡಿರಾ? ಇಷ್ಟಕ್ಕೂ ಆಗಿದ್ದಿಷ್ಟು: ‘ಒಳ್ಳೆಯ ಶೀರ್ಷಿಕೆ ಸೂಚಿಸುವವರಿಗೆ ಐದು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಚಿತ್ರ ತಂಡ ಈ ಹಿಂದೆ ಘೋಷಿಸಿತ್ತು.

ಮೆಹಬೂಬ್‌ ಸ್ಟುಡಿಯೊದಲ್ಲಿ ಶಾರುಖ್‌ ಅವರನ್ನು ಅಚಾನಕ್‌ ಭೇಟಿಯಾದ ರಣಬೀರ್‌ ‘ಜಬ್‌ ಹ್ಯಾರಿ ಮೆಟ್‌ ಸೇಜಲ್‌’ ಶೀರ್ಷಿಕೆಯ ಬಗ್ಗೆ ಚರ್ಚಿಸಿದ್ದರು. ಈಗ ಅದೇ ಶೀರ್ಷಿಕೆ ಅಂತಿಮಗೊಂಡಿರುವ ಕಾರಣ ‘ಶೀರ್ಷಿಕೆಗಾಗಿ ಐದು ಸಾವಿರ ರೂಪಾಯಿ ಕೊಡಿ’ ಎಂದು ರಣಬೀರ್‌ ಕಾಲೆಳೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್‌, ‘ನೀನೇ ಶೀರ್ಷಿಕೆ ಕೊಟ್ಟಿರುವುದಕ್ಕೆ ದಾಖಲೆ ಏನಿದೆ?’ ಎಂದು ಮರು ಟ್ವೀಟ್‌ ಮಾಡಿದ್ದರು. ಕೊನೆಗೆ ಶಾರುಖ್‌ ಖಾನ್‌ ಅವರೇ ಪರಸ್ಪರ ಕಾಲೆಳೆದುಕೊಂಡಿದ್ದು ಸಾಕು ಎಂದು, ‘ಮಾರಾಯ ನಿನ್ನ ದುಡ್ಡು ನಿನಗೆ ಕೊಡೋಣ. ಆದರೆ ನೀನು ಕರಣ್‌ ಜೋಹರ್‌ಗೆ ಪಾಲು ಕೊಡಬೇಕು’ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದರು.

ಮರುಕ್ಷಣವೇ ಕರಣ್‌ ಟ್ವೀಟ್‌ ಮಾಡಿ,  ‘ಆಯ್ತು ಮಾರಾಯ ನಿನ್ನ ಪಾಲು 1.250 ರೂಪಾಯಿ ಕೊಡುತ್ತೇನೆ’ ಎಂದು ರಣಬೀರ್‌ಗೆ ಹೇಳಿದ್ದಾರೆ.

ಶಾರುಖ್‌ ಖಾನ್, ರಣಬೀರ್‌ ಕಪೂರ್‌ಗೆ ಹಣ ನೀಡುತ್ತಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಚಿತ್ರಕ್ಕೆ ಇಬ್ಬರೂ ನಟರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟು ಮಾಡಿದ್ದಾರೆ. ಅಂತೂ ಇಂತೂ ಬಹುಮಾನದ ಮೊತ್ತವನ್ನು ಮೂವರೂ ಹಂಚಿಕೊಂಡಿದ್ದಾರಂತೆ. ‘ಜಬ್‌ ಹ್ಯಾರಿ...’ನಲ್ಲಿ ಶಾರುಖ್‌ ಖಾನ್‌ ಮತ್ತು ಅನುಷ್ಕಾ ಶರ್ಮಾ  ಜೋಡಿಯಾಗಿ ನಟಿಸುವುದು ಖಚಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry