ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಹಾಕಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಜಯಭೇರಿ ಬಾರಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಜಯಭೇರಿ ಬಾರಿಸಿದ ಭಾರತ

ಲಂಡನ್: ಪಾಕಿಸ್ತಾನ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್‍ ಪಂದ್ಯದಲ್ಲಿ ಟೀಂ ಇಂಡಿಯಾ ಪರಾಭವಗೊಂಡು ನಿರಾಸೆ ಮೂಡಿಸಿದರೆ ಇತ್ತ ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ನ ಪೂಲ್ ಬಿ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7- 1 ಅಂತರದಲ್ಲಿ ಪರಾಭವಗೊಳಿಸಿ ಗೆಲುವಿನ ನಗೆ ಬೀರಿದೆ.

ಭಾರತದ ಕ್ರೀಡಾಭಿಮಾನಿಗಳು ಕ್ರಿಕೆಟ್ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡಿರುವಾಗ ಲಂಡನ್‍ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತೀಯ ಹಾಕಿ ತಂಡ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಸಂತಸ ತಂದಿದೆ.

ಈ ಪಂದ್ಯಾವಳಿಯಲ್ಲಿ ಭಾರತ ಸತತವಾಗಿ ಮೂರನೇ ಬಾರಿ ಜಯಗಳಿಸಿದ್ದು, ಪೂಲ್ ಬಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ.

ಪಂದ್ಯದ ಆರಂಭದಲ್ಲೇ ಭಾರತೀಯ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. ಭಾರತದ ಪರವಾಗಿ ತಲ್ವಿಂದರ್ ಸಿಂಗ್ ,ಹರ್ಮನ್ ಪ್ರೀತ್ ಸಿಂಗ್, ಆಕಾಶ್ ದೀಪ್ ಸಿಂಗ್ ಎರಡೆರಡು ಗೋಲು ಬಾರಿಸಿದ್ದಾರೆ.
ಮೊದಲ ಕ್ವಾರ್ಟರ್‍‍ನಲ್ಲಿ ತಂಡದ ನಾಯಕ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಭಾರತ ಗೋಲು ಗಳಿಸಿದೆ. 21 ನೇ ನಿಮಿಷದಲ್ಲಿ ಎರಡನೇ ಗೋಲು ಹೊಡೆದ ತಲ್ವಿಂದರ್ 24ನೇ ನಿಮಿಷದಲ್ಲಿ ಮೂರನೇ ಗೋಲು ಹೊಡೆದಿದ್ದಾರೆ, ಪೆನಾಲ್ಟಿ  ಕಾರ್ನರ್ ಮೂಲಕ ಹರ್ಮನ್ ಪ್ರೀತ್ 4ನೇ ಗೋಲು ಬಾರಿಸಿದರೆ ಆಕಾಶ್ ದೀಪ್ ಅವರು 5ನೇ ಗೋಲು ಬಾರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಪ್ರದೀಪ್  ಮೋರ್ 6ನೇ ಗೋಲು ಬಾರಿಸಿದರು.

57ನೇ ನಿಮಿಷದಲ್ಲಿ ಪಾಕಿಸ್ತಾನದ ಮುಹಮ್ಮದ್ ಉಮರ್ ಭಟ್ ಒಂದು ಗೋಲು ಬಾರಿಸುವ ಮೂಲಕ ಪಾಕ್ ಖಾತೆ ತೆರೆಯುವಂತಾಯಿತು.  59ನೇ ನಿಮಿಷದಲ್ಲಿ ಆಕಾಶ್ ಮತ್ತೊಂದು ಗೋಲು ಬಾರಿಸಿದ್ದು ಈ ಮೂಲಕ ಭಾರತ ತಂಡ ಪಾಕಿಸ್ತಾನವನ್ನು 7-1 ಅಂತರದಿಂದ ಪರಾಭವಗೊಳಿಸಿತು.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಲೆಂಡ್ ವಿರುದ್ಧ ಆಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.