ಕಬ್ಬನ್ ಉದ್ಯಾನದಲ್ಲಿ ತಡರಾತ್ರಿ ‘ಪಾರ್ಟಿ’ ನಡೆಸಲು ವಿರೋಧ

7

ಕಬ್ಬನ್ ಉದ್ಯಾನದಲ್ಲಿ ತಡರಾತ್ರಿ ‘ಪಾರ್ಟಿ’ ನಡೆಸಲು ವಿರೋಧ

Published:
Updated:
ಕಬ್ಬನ್ ಉದ್ಯಾನದಲ್ಲಿ ತಡರಾತ್ರಿ ‘ಪಾರ್ಟಿ’ ನಡೆಸಲು ವಿರೋಧ

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ತಡ ರಾತ್ರಿವರೆಗೂ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ  ಉದ್ಯಾನದ ನಡಿಗೆದಾರರ ಸಂಘದ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು.

‘ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಖುಷಿಪಡಿಸಲು ಪ್ರವಾಸೋದ್ಯಮ ಇಲಾಖೆಯು ಉದ್ಯಾನದಲ್ಲಿ ರಾತ್ರಿ ವೇಳೆ ಪಾರ್ಟಿಗಳನ್ನು ಆಯೋಜಿಸಲು ಮುಂದಾಗಿದೆ. ಈ ಸಂಬಂಧ ಅನುಮತಿ ನೀಡುವಂತೆ ಕೋರಿ ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು’ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌. ಉಮೇಶ್ ಆಗ್ರಹಿಸಿದರು.

‘ವಾಣಿಜ್ಯ ಉದ್ದೇಶಕ್ಕೆ ಉದ್ಯಾನದ ಜಾಗ ನೀಡಬಾರದು. ಮೂಲಸೌಕರ್ಯಗಳನ್ನು ಒದಗಿಸಿ ಉದ್ಯಾನದ ಜಾಗದ ಸುತ್ತಲೂ  ತಡೆಗೋಡೆ ನಿರ್ಮಿಸಬೇಕು. ಉದ್ಯಾನಕ್ಕೆ ಬರುವ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಲು ಸೂಕ್ತ ಭದ್ರತೆ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಕಲ್ಪಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry