ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್ ವಿಮಾನದಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪಾಸ್

Last Updated 19 ಜೂನ್ 2017, 9:10 IST
ಅಕ್ಷರ ಗಾತ್ರ

ಮುಂಬೈ: ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ಜೆಟ್ ಏರ್‌ವೇಸ್‌ ವಿಮಾನದಲ್ಲಿ ಮಾರ್ಗ ಮಧ್ಯದಲ್ಲಿ ಭಾನುವಾರ ಜನಿಸಿದ ಗಂಡು ಮಗುವಿಗೆ ಜೆಟ್‌ ಏರ್‌ ವಿಮಾನ ಸಂಸ್ಥೆಯು ಜೀವನಪೂರ್ತಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಪಾಸ್ ನೀಡಿದೆ 

‘ಇದೇ ಮೊದಲ ಬಾರಿಗೆ ಜೆಟ್ ವಿಮಾನದಲ್ಲಿ ಮಗುವೊಂದು ಜನಿಸಿದೆ. ಹಾಗಾಗಿ ಆ ಖುಷಿಗಾಗಿ ಆ ಮಗುವಿಗೆ ಜೆಟ್ ವಿಮಾನ ಉಚಿತ ಪಾಸ್ ನೀಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಮುಂಬೈನ ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ ತಾಯಿ ಮಗು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ

ಭಾನುವಾರ ಬೆಳಿಗ್ಗೆ 2.55ಕ್ಕೆ ಜೆಟ್‌ ಏರ್‌ವೇಸ್‌ 9 ಡಬ್ಲ್ಯು 569 ವಿಮಾನ ದಮ್ಮಾಮ್‌ನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ವಿಮಾನದ ಸಿಬ್ಬಂದಿ ತುರ್ತು ಘೋಷಣೆ ಮೊಳಗಿಸಿದ್ದರು. ತಕ್ಷಣ ವಿಮಾನವನ್ನು ಮುಂಬೈನತ್ತ ತಿರುಗಿಸಲಾಗಿತ್ತು.

ವಿಮಾನ ಇನ್ನೂ ಅರಬ್ಬೀ ಸಮುದ್ರದ ಮೇಲ್ಭಾಗದಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಾಯಿ ಮಗುವಿಗೆ ಜನ್ಮ ನೀಡಿದ್ದರು. ವಿಮಾನದ ಸಿಬ್ಬಂದಿ ಮತ್ತು ಕೇರಳಕ್ಕೆ ಪ್ರಯಾಣಿಸುತ್ತಿದ್ದ ಶುಶ್ರೂಷಕಿಯರು ಮಹಿಳೆಗೆ ಹೆರಿಗೆ ಮಾಡಿಸಲು ನೆರವಾಗಿದ್ದರು. ಇದರೊಂದಿಗೆ ತಾಯಿಯ ಗರ್ಭದಿಂದ ವಿಮಾನದಲ್ಲಿ ಹೊಸ ಅತಿಥಿಯಾಗಿ ಮಗುವಿನ ಆಗಮನವಾಗಿದೆ ಎಂದು ವಿಮಾನ ಸಂಸ್ಥೆ ಹೇಳಿಕೊಂಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT