ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

219 ಹೊಸ ಗ್ರಹಗಳನ್ನು ಪತ್ತೆ ಹಚ್ಚಿದ ನಾಸಾ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಕೆಪ್ಲರ್‌ ದೂರದರ್ಶಕ ಹೊಸದಾಗಿ 219 ಗ್ರಹಗಳನ್ನು ಪತ್ತೆ ಮಾಡಿದೆ.

ಇವುಗಳಲ್ಲಿ ಕನಿಷ್ಠ 10 ಗ್ರಹಗಳು ಭೂಮಿಯ ಗಾತ್ರದಲ್ಲಿದ್ದು, ಜೀವಿಗಳು ವಾಸಿಸಲು ಅನುಕೂಲಕರ ವಾತಾವರಣವಿದೆ.

ಇಲ್ಲಿಯವರೆಗೆ ಕೆಪ್ಲರ್‌ ದೂರದರ್ಶಕ 4,034 ಗ್ರಹಗಳನ್ನು ಪತ್ತೆ ಮಾಡಿದೆ. ಇವುಗಳಲ್ಲಿ 2,335 ಗ್ರಹಗಳನ್ನು ಸೌರಮಂಡಲದಾಚೆ ಇರುವ ಇನ್ನೊಂದು ಸೌರಮಂಡಲದಲ್ಲಿರುವ ಗ್ರಹಗಳೆಂದು ಪರಿಗಣಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೆಪ್ಲರ್‌ ದೂರದರ್ಶಕದಿಂದ ಸದ್ಯ ದೊರೆತಿರುವ ಮಾಹಿತಿಯು ಸೌರಮಂಡಲದಾಚೆ ಇರುವ ಗ್ರಹಗಳ ಬಗ್ಗೆ ಸಮಗ್ರ ಅಂಶಗಳನ್ನು ಒಳಗೊಂಡಿದೆ. ಗ್ರಹಗಳ ಸಂಖ್ಯೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT