ಗೆಳತಿ ಸೋಫಿ ಶೈನ್ ಜತೆ ಕ್ರಿಕೆಟಿಗ ಶಿಖರ್ ಧವನ್ ಅವರು ಉಂಗುರ ಬದಲಾಯಿಸಿಕೊಂಡು, ಎರಡನೇ ವಿವಾಹಕ್ಕೆ ಸಜ್ಜಾಗಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ADVERTISEMENT
ನಿಶ್ಚಿತಾರ್ಥ ಮಾಡಿಕೊಂಡ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿ ಹಂಚಿಕೊಂಡಿದೆ.
ಕೃಪೆ: ಇನ್ಸ್ಟಾಗ್ರಾಮ್
‘ನಗೆಯಿಂದ..ಕನಸುಗಳವರೆಗೆ. ನಮ್ಮ ನಿಶ್ಚಿತಾರ್ಥಕ್ಕೆ ಶುಭಕೋರಿ ಆಶೀರ್ವದಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂಬ ಅಡಿಬರಹವನ್ನು ಬರೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ಶಿಖರ್ ಧವನ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸೋಫಿ ಶೈನ್ ಐರಿಶ್ ಮೂಲದವರು. ಈ ಜೋಡಿ ಫೆಬ್ರುವರಿಯಲ್ಲಿ ಹಸೆಮಣೆ ಏರಲಿದೆ.
ಕೃಪೆ: ಇನ್ಸ್ಟಾಗ್ರಾಮ್
ಇವರ ವಿವಾಹ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಯರು ಭಾಗವಹಿಸಲಿದ್ದಾರೆ ಎನ್ನುತ್ತಿವೆ ವರದಿಗಳು.
ಕೃಪೆ: ಇನ್ಸ್ಟಾಗ್ರಾಮ್
ಸೋಫಿ ಶೈನ್ ಅವರು , ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರುಕಟ್ಟೆ ಮತ್ತು ನಿರ್ವಹಣೆಯಲ್ಲಿ ಪದವಿಯನ್ನು ಪಡೆದಿದ್ದಾರೆ. ಸದ್ಯ ಅವರು ಶಿಖರ್ ಧವನ್ ಫೌಂಡೇಶನ್ ಅನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.