ಶನಿವಾರ, ಡಿಸೆಂಬರ್ 7, 2019
25 °C

ಅಮೆರಿಕದ ನೈಟ್‌ ಕ್ಲಬ್‌ನಲ್ಲಿ ಗುಂಡಿನ ದಾಳಿ: 17 ಮಂದಿಗೆ ಗಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಮೆರಿಕದ ನೈಟ್‌ ಕ್ಲಬ್‌ನಲ್ಲಿ ಗುಂಡಿನ ದಾಳಿ: 17 ಮಂದಿಗೆ ಗಾಯ

ಲಿಟಲ್‌ ರಾಕ್: ಅಮೆರಿಕದ ಅರ್ಕನ್ಸಾಸ್‌ ರಾಜ್ಯದ ಲಿಟಲ್‌ ರಾಕ್‌ನ ನೈಟ್‌ ಕ್ಲಬ್‌ ಒಂದರಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ.

‘ನೈಟ್‌ ಕ್ಲಬ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವಿಚಾರವಾಗಿ ನಡೆದ ಗಲಾಟೆಯೇ ಗುಂಡಿನ ದಾಳಿಗೆ ಕಾರಣ ಎಂದು ಗೊತ್ತಾಗಿದೆ. ಬಂದೂಕುಧಾರಿ ನೈಟ್‌ ಕ್ಲಬ್‌ ಒಳಗೆ ಮನಬಂದಂತೆ ಗುಂಡು ಹಾರಿಸಿದ್ದಾನೆ’ ಎಂದು ಲಿಟಲ್‌ ರಾಕ್‌ ಪೊಲೀಸರು ತಿಳಿಸಿದ್ದಾರೆ.

‘ಇದು ಉದ್ದೇಶಪೂರ್ವಕವಾಗಿ ನಡೆದ ದಾಳಿಯೋ ಅಥವಾ ಭಯೋತ್ಪಾದಕ ಕೃತ್ಯವೋ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಗಾಯಗೊಂಡ 17 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ, ಗಾಯಗೊಂಡಿರುವ 17 ಮಂದಿಗೂ ಗುಂಡು ತಗುಲಿಲ್ಲ. ಕೆಲವರು ಕಾಲ್ತುಳಿತಕ್ಕೆ ಸಿಕ್ಕಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಪ್ರತಿಕ್ರಿಯಿಸಿ (+)