ಶನಿವಾರ, ಡಿಸೆಂಬರ್ 7, 2019
25 °C

ಜಾವೆಲಿನ್‌: ನೀರಜ್‌ಗೆ ಐದನೇ ಸ್ಥಾನ

Published:
Updated:
ಜಾವೆಲಿನ್‌: ನೀರಜ್‌ಗೆ ಐದನೇ ಸ್ಥಾನ

ಪ್ಯಾರಿಸ್ : ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಇಲ್ಲಿ ನಡೆದ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ನಲ್ಲಿ ಭಾನುವಾರ ಐದನೇ ಸ್ಥಾನ ಗಳಿಸಿದ್ದಾರೆ.

10 ಸ್ಪರ್ಧಿಗಳು ಇದ್ದ ಪೈಪೋಟಿಯಲ್ಲಿ ನೀರಜ್ 84.67ಮೀಟರ್‌ ಜಾವೆಲಿನ್‌ ಎಸೆಯುವ ಮೂಲಕ ಐದನೇಯವರಾಗಿ ಪಂದ್ಯ ಕೊನೆಗೊಳಿಸಿದರು.

19 ವರ್ಷದ ಆಟಗಾರ ತಮ್ಮ ವೈಯಕ್ತಿಕ ಉತ್ತಮ ದೂರವನ್ನು (86.48ಮೀ)  ಮೀರಿ ಇಲ್ಲಿ ಮೂರನೇ ಪ್ರಯತ್ನದಲ್ಲಿ ಉತ್ತಮ ಸಾಧನೆ ಮಾಡಿದರು.

ಜರ್ಮನಿಯ ಜೊಹನ್ನಾಸ್ 88.74ಮೀಟರ್‌ ಎಸೆಯುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು.

ನೀರಜ್‌ ಜುಲೈ 6ರಿಂದ ಭುವನೇಶ್ವರದಲ್ಲಿ ನಡೆಯುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ರತಿಕ್ರಿಯಿಸಿ (+)