ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4,200 ಮರಗಳಿಗೆ ಕೊಡಲಿ

ಮೀಸಲು ಅರಣ್ಯದಲ್ಲಿ ಸಾಗುವಳಿ ಮಾಡಿದ ಆರೋಪ: 30 ಮಂದಿ ಸೆರೆ
Last Updated 2 ಜುಲೈ 2017, 20:01 IST
ಅಕ್ಷರ ಗಾತ್ರ

ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಇಲ್ಲಿಗೆ ಸಮೀಪದ ಕಮಲಾಪುರದ ಮೀಸಲು ಅರಣ್ಯದಲ್ಲಿನ ಮರಗಳನ್ನು ಕಡಿದು, ಸಾಗುವಳಿ ಮಾಡಿದ ಆರೋಪದ ಮೇಲೆ ಗ್ರಾಮದ 30 ಮಂದಿಯನ್ನು ಭಾನುವಾರ ಬಂಧಿಸಲಾಗಿದೆ.

‘25 ಹೆಕ್ಟೇರ್ ವ್ಯಾಪ್ತಿಯಲ್ಲಿ (ಸರ್ವೆ ಸಂಖ್ಯೆ 69 ಮತ್ತು 72) ಅರಣ್ಯ ಇಲಾಖೆಯು 2007ರಲ್ಲಿ ನಾಟಿ ಮಾಡಿದ್ದ ನೇರಳೆ, ಹೊಂಗೆ ಸೇರಿ 4,200 ಮರಗಳು ಹಾಗೂ ನೈಸರ್ಗಿಕವಾಗಿ ಬೆಳೆದಿದ್ದ ಶ್ರೀಗಂಧ ಮತ್ತಿತರ ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ್ದಾರೆ. ಅಲ್ಲದೆ, ಬೆಂಕಿ ಹಚ್ಚಿ ನಾಶಪಡಿಸಿದ್ದು, ಉಳುಮೆ ಮಾಡಿದ್ದಾರೆ’ ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಓ) ಸೋನಾಲ್ ವೃಷ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು

‘ಅರಣ್ಯ ಭೂಮಿ ಒತ್ತುವರಿಗೆ ಯತ್ನಿಸಿದ ಆರೋಪದಲ್ಲಿ 82 ಮಂದಿಯನ್ನು ವಶಕ್ಕೆ ಪಡೆದು, ಅಕ್ರಮ ಎಸಗಿದ 30 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ. ಅವರಿಗೆ ಸಹಾಯ ನೀಡಿದ 52 ಮಂದಿಯನ್ನು ಮುಚ್ಚಳಿಕೆ ಬರೆಯಿಸಿಕೊಂಡು ಬಿಡಲಾಗಿದೆ’ ಎಂದರು.

‘ಈ  ಭೂಮಿಯನ್ನು ಗ್ರಾಮದ ರೈತರು 1990ರಿಂದ ಉಳುಮೆ ಮಾಡುತ್ತಿದ್ದರು. ಆದರೆ, 2006ರಲ್ಲಿ ಅರಣ್ಯ ಇಲಾಖೆ ತೆರವುಗೊಳಿಸಿ, ಗ್ರಾಮ ಅರಣ್ಯ ಸಮಿತಿಯ ಉಸ್ತುವಾರಿಗೆ ನೀಡಿತು. ಆದರೆ, ಬಗರ್‌ ಹುಕುಂ ಅಡಿಯಲ್ಲಿ ‘ಹಕ್ಕುಪತ್ರ’ ನೀಡು ವಂತೆ ಗ್ರಾಮಸ್ಥರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಅಧಿಕಾರಿಗಳು ನಿರಾಕರಿಸಿ ದ್ದಾರೆ. ಇದರಿಂದ ನೊಂದ ರೈತರು ಭಾನುವಾರ  ಸುಮಾರು ಮೂರೂವರೆ ಎಕರೆಯಷ್ಟು ಪ್ರದೇಶದಲ್ಲಿ ಉಳುಮೆ ಮಾಡಿದ್ದಾರೆ. ಸುಮಾರು 100ರಿಂದ 110 ಮರಗಳು ನಾಶವಾಗಿರಬಹುದು’ ಎಂದು ಗ್ರಾಮದ ರಂಗಪ್ಪ ಕಡದಕಟ್ಟಿ ಹಾಗೂ ಮಂಜಪ್ಪ ಬಳ್ಳೇಶ್ವರ ತಿಳಿಸಿದರು.

‘ಎರಡು ದಿನಗಳ ಹಿಂದೆ ಮರ ಕಡಿಯುವ ಯತ್ನ ನಡೆದಿತ್ತು. ನಾವು ಮನವೊಲಿಕೆಗೆ ಪ್ರಯತ್ನಿಸಿದ್ದೆವು. ಆದರೆ, ಭಾನುವಾರ ಮರ ಕಡಿದು ಉಳುಮೆ ಮಾಡಿದ್ದು, ದೂರು ದಾಖಲಿಸಿಕೊಂಡಿ ದ್ದೇವೆ’ ಎಂದು ಹಿರೇಕೆರೂರ ತಾಲ್ಲೂಕು ವಲಯ ಅರಣ್ಯಾಧಿಕಾರಿ ಬಿ.ಸಿ.ಅರಿಶಿಣದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT