ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಅಂಕಪಟ್ಟಿ: ಪ್ರಕರಣ ದಾಖಲು

Last Updated 3 ಜುಲೈ 2017, 6:08 IST
ಅಕ್ಷರ ಗಾತ್ರ

ಹೊಸಪೇಟೆ: ಪರೀಕ್ಷೆಯನ್ನೇ ನಡೆಸದೆ ನಕಲಿ ಅಂಕಪಟ್ಟಿ ನೀಡಿರುವ ಆರೋಪದ ಮೇಲೆ ನಗರದ ಬಸಮ್ಮ ಮೆಮೊರಿಯಲ್‌ ಕಾಲೇಜಿನ ವಿರುದ್ಧ ಇಲ್ಲಿನ ಪಟ್ಟಣ ಠಾಣೆಯಲ್ಲಿ ಶನಿವಾರ ತಡರಾತ್ರಿ ಪ್ರಕರಣ ದಾಖಲಾಗಿದೆ.

ನಗರದ ನಿವಾಸಿ ಎಸ್‌.ಪಿ. ಪವನ್‌ ಕುಮಾರ್‌ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಪವನ್‌ ಕುಮಾರ್ 2014ರಲ್ಲಿ ಡಿಪ್ಲೊಮಾ ಇನ್‌ ಕಂಪ್ಯೂಟರ್ಸ್‌ ಕೋರ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದರು. ಆದರೆ, ಕೋರ್ಸ್‌ ಮುಗಿಯುವ ಮೊದಲೇ, ಉತ್ತರ ಪ್ರದೇಶದ ಲಖನೌನಲ್ಲಿರುವ ಬೋರ್ಡ್‌ ಆಫ್‌ ಟೆಕ್ನಿಕಲ್‌ ಎಜ್ಯುಕೇಶನ್‌ನಿಂದ 2013ರ ನಕಲಿ ಅಂಕಪಟ್ಟಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಪವನ್‌ಕುಮಾರ್‌ ಬಸಮ್ಮ ಕಾಲೇಜಿನಲ್ಲಿ 2014ರ ಫೆಬ್ರುವರಿಯಲ್ಲಿ ₹ 30 ಸಾವಿರ ಶುಲ್ಕ ಪಾವತಿಸಿ ಪ್ರವೇಶ ಪಡೆದಿದ್ದರು. ರಸೀದಿ ಮೇಲೆ ಬುಂದೇಲ ಖಂಡ ಎಂದು ನಮೂದಿಸಲಾಗಿತ್ತು. ಅದೇ ವರ್ಷ ಮೇ ತಿಂಗಳಲ್ಲಿ ಮತ್ತೆ ₹15 ಸಾವಿರ ಪಾವತಿಸಿದ ಅವರಿಗೆ

ಕೆಲವೇ ದಿನಗಳ ಬಳಿಕ ಅವರಿಗೆ ಅಂಕಪಟ್ಟಿ ನೀಡಲಾಯಿತು. ಅದು 2013ನೇ ವರ್ಷದ್ದಾಗಿದ್ದು, ಫಲಿತಾಂಶ ಪ್ರಥಮ ದರ್ಜೆ ಆಗಿತ್ತು. ಅದೇ ಅಂಕಪಟ್ಟಿ ಸಲ್ಲಿಸಿ, ಪವನ್‌ ಕುಮಾರ್‌ ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ 2014 ರಲ್ಲಿ ಕೆಲಸ ಪಡೆದಿದ್ದರು.

‌ದಾಖಲೆಗಳನ್ನು ಪರಿಶೀಲಿಸಿದ ಕಂಪೆನಿಯು 2014ರ ಸೆಪ್ಟೆಂಬರ್‌ 11ರಂದು ನೋಟಿಸ್‌ ಜಾರಿ ಮಾಡಿ ಅಸಲಿ ಅಂಕಪಟ್ಟಿ ಪ್ರಸ್ತುತಪಡಿಸು ವಂತೆ ಪವನ್‌ ಕುಮಾರ್‌ಗೆ ಸೂಚಿಸಿದೆ. ಪವನ್‌ ಮತ್ತೆ ಅದೇ ಅಂಕಪಟ್ಟಿ ನೀಡಿದ್ದಾರೆ.

ಕಂಪೆನಿ ಮತ್ತೊಮ್ಮೆ ಅದನ್ನು ಪರಿಶೀಲಿಸಿದಾಗ ನಕಲಿ ಅಂಕಪಟ್ಟಿ ಎಂದು ಸಾಬೀತಾಗಿ‌ದ್ದರಿಂದ ಕೆಲಸ ದಿಂದ ತೆಗೆದು ಹಾಕಿತು’ ಎಂದು ವಿವರಿಸಿದ್ದಾರೆ. ‘ಈ ಪ್ರಕರಣದ ತನಿಖೆಯ ಭಾಗವಾಗಿ, ದೂರುದಾರ ವ್ಯಕ್ತಿಯ ವಿಚಾರಣೆಯನ್ನೂ ನಡೆಸಲಾಗುವುದು’ ಎಂದು ಎಸ್ಪಿ ಆರ್‌. ಚೇತನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT