ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಖಾತೆಗೆ ಕನ್ನ ₹ 2.17 ಲಕ್ಷ ಡ್ರಾ

Last Updated 3 ಜುಲೈ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಸೈಬರ್ ಕಳ್ಳರು ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ₹2.17 ಲಕ್ಷ ಡ್ರಾ ಮಾಡಿದ್ದಾರೆ ಎಂದು ಆರೋಪಿಸಿ ಸುಧೀಂದ್ರ  ಎಂಬುವರು ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

ಎಂಆರ್‌ವಿ 2ನೇ ಹಂತದ ಪೂಜಾರಿ ಲೇಔಟ್‌ನ ನಿವಾಸಿಯಾಗಿರುವ ಸುಧೀಂದ್ರ ಮಹಾತ್ಮ ಗಾಂಧಿ ರಸ್ತೆಯ ಸಿಟಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ.

‘ಜೂನ್‌ 30ರ ಬೆಳಿಗ್ಗೆ 9.30ಕ್ಕೆ ಚೆನ್ನೈನ ಸಿಟಿ ಬ್ಯಾಂಕ್‌ನ ಪ್ರಧಾನ ಕಚೇರಿ ಅಧಿಕಾರಿಗಳು ಕರೆ ಮಾಡಿ, ‘ನೀವು ಬೆಂಗಳೂರಿನಲ್ಲಿ ಇದ್ದೀರಾ. ನಿಮ್ಮ ಡೆಬಿಟ್ ಕಾರ್ಡ್‌ನ ಮೂಲಕ ₹1.20 ಲಕ್ಷ ಡ್ರಾ ಮಾಡಿದ್ದೀರಾ’ ಎಂದು ಪ್ರಶ್ನಿಸಿದ್ದರು. ಗಾಬರಿಗೊಂಡು ಇಲ್ಲವೆಂದು ಉತ್ತರಿಸಿದೆ. ಆಗ ವಿದೇಶದ ಸೈಬರ್ ವಂಚಕರು ಖಾತೆಗೆ ಕನ್ನ ಹಾಕಿದ್ದಾರೆ ಎಂದು ಅಧಿಕಾರಿಗಳಿಂದ ಗೊತ್ತಾಯಿತು’ ಎಂದು ಸುಧೀಂದ್ರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಧಿಕಾರಿಗಳು ಕರೆ ಸ್ಥಗಿತಗೊಳಿಸಿದ ಕೆಲವೇ ಕ್ಷಣದಲ್ಲಿ ₹2.17 ಲಕ್ಷ ಡ್ರಾ ಆಗಿರುವ ಬಗ್ಗೆ ಮೂರು ಸಂದೇಶಗಳು ಸುಧೀಂದ್ರ ಅವರ ಮೊಬೈಲ್ ಸಂಖ್ಯೆಗೆ ಬಂದಿದ್ದವು. ಕೂಡಲೇ ನಗರದ ಸಿಟಿ ಬ್ಯಾಂಕ್ ಅಧಿಕಾರಿಗಳಿಗೆ ಕರೆ ಮಾಡಿ ಕಾರ್ಡ್‌ ಬ್ಲಾಕ್ ಮಾಡಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT