ಸೋಮವಾರ, ಡಿಸೆಂಬರ್ 9, 2019
23 °C
ಸೂಕ್ತ ಕ್ರಮ ಕೈಗೊಳ್ಳಲು ಚೀನಾಗೆ ಸಲಹೆ

ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ; ಪ್ರಚೋದನಾತ್ಮಕ ನಡೆಗೆ ಟ್ರಂಪ್‌ ಟ್ವಿಟರ್‌ ಗುದ್ದು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ; ಪ್ರಚೋದನಾತ್ಮಕ ನಡೆಗೆ ಟ್ರಂಪ್‌ ಟ್ವಿಟರ್‌ ಗುದ್ದು

ನ್ಯೂಯಾರ್ಕ್‌: ಉತ್ತರ ಕೊರಿಯಾ ಮಂಗಳವಾರ ಮತ್ತೊಂದು ಖಂಡಾಂತರ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ಉತ್ತರ ಕೊರಿಯಾದ ಅವಿವೇಕತನಕ್ಕೆ ಅಂತ್ಯ ಕಾಣಿಸಬೇಕು ಎಂದಿದ್ದಾರೆ.

ಉತ್ತರ ಕೊರಿಯಾ ಉಡಾಯಿಸಿರುವ ಕ್ಷಿಪಣಿ ಜಪಾನ್‌ ಸಮೀಪದ ಸಮುದ್ರ ಭಾಗದಲ್ಲಿ ಇಳಿದಿದೆ. ಈ ಕುರಿತು ಟ್ರಂಪ್‌, ‘ಚೀನಾ ಸರಿಯಾದ ಕ್ರಮ ತೆಗೆದುಕೊಂಡು ಉತ್ತರ ಕೊರಿಯಾದ ಅವಿವೇಕತನವನ್ನು ಕೊನೆಗಾಣಿಸಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಂಗ್‌–ಉನ್‌ ಬಗ್ಗೆ ‘ಈತನಿಗೆ ಜೀವಮಾನದಲ್ಲಿ ಮಾಡಲು ಇದಕ್ಕಿಂತಲೂ ಉತ್ತಮವಾದ ಬೇರೆ ಏನಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಚೀನಾ ಸಮೀಪದ ಗಡಿ ಭಾಗದಿಂದ ಉತ್ತರ ಕೊರಿಯಾ ಗುರುತು ಕಾಣದ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ್ದು, ಜಪಾನ್‌ ತೀರ ಭಾಗದಲ್ಲಿ ಇಳಿದಿದೆ ಎಂದು ದಕ್ಷಿಣ ಕೊರಿಯಾ ಸೇನೆ ಹಾಗೂ ಟೋಕಿಯೋದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)