ಬುಧವಾರ, ಡಿಸೆಂಬರ್ 11, 2019
24 °C

ಪತಿಯಿಂದ ಪತ್ನಿಗೆ ಇರಿತ; ನೆರವಿಗೆ ಬಾರದ ನೆರೆಯವರು ಮಹಿಳೆಯ ನರಳಾಟ ಚಿತ್ರೀಕರಿಸಿದರು!

ಪಿಟಿಐ Updated:

ಅಕ್ಷರ ಗಾತ್ರ : | |

ಪತಿಯಿಂದ ಪತ್ನಿಗೆ ಇರಿತ; ನೆರವಿಗೆ ಬಾರದ ನೆರೆಯವರು ಮಹಿಳೆಯ ನರಳಾಟ ಚಿತ್ರೀಕರಿಸಿದರು!

ಚಂಡೀಗಢ: ಗಂಡನಿಂದಲೇ ಇರಿತಕ್ಕೆ ಒಳಗಾದ ಪತ್ನಿಯು ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರೆ, ಅಕ್ಕ–ಪಕ್ಕದ ಮನೆಯವರು ಘಟನೆಯನ್ನು ಚಿತ್ರೀಕರಿಸುವುದರಲ್ಲಿ ಮಗ್ನರಾಗಿದ್ದರು!

ಮಹಿಳೆಗೆ ಮನಸ್ಸಿಗೆ ಬಂದಂತೆ ರಂಪದಿಂದ ಪತಿ ಇರಿದಿರುವ   ಘಟನೆ ಹರಿಯಾಣದ ಜಿಂದ್‌ ಜಿಲ್ಲೆಯಲ್ಲಿ ನಡೆದಿದೆ. ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಬದಲು ನೆರೆಯವರು ದೃಶ್ಯ ಚಿತ್ರೀಕರಣದಲ್ಲಿ ತೊಡಗಿದ್ದರು ಎಂದು ಪೊಲೀಸ್‌ ಅಧಿಕಾರಿ ರೊಹ್ತಾಷ್‌ ಕುಮಾರ್‌ ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಆದರೆ, ನರಳುತ್ತಿದ್ದ ಮಹಿಳೆಯ ನೆರವಿಗೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಗುಂಪು ಗೂಡಿದ್ದ ಜನರಲ್ಲಿ ಕೆಲವರು ನೋವಿನಿಂದ ಅರಳುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ನಲವತ್ತು ವರ್ಷ ವಯೋಮಾನದ ಗಂಡ–ಹೆಂಡತಿಗೆ ಮೂವರು ಮಕ್ಕಳಿದ್ದು, ಜಗಳ ತಾರಕ್ಕೇರಿ ಹೆಂಡತಿ ಕಣ್ಣಿಗೆ ಖಾರದ ಪುಡಿ ಎರಚಿದ ಗಂಡ ಜೂನ್‌ 30ರಂದು ರಂಪದಿಂದ ಹಲ್ಲೆ ನಡೆಸಿದ್ದಾನೆ. ಬರೋಲಿ ಗ್ರಾಮದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)